ಹಬ್ಬದ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯದಲ್ಲಿ ಸ್ವಯಂಸೇವಕರು 
ರಾಜ್ಯ

ಹಲನಾಯಕನಹಳ್ಳಿ ಕೆರೆಯಿಂದ 700 ಕೆಜಿಗೂ ಹೆಚ್ಚು ಪಿಒಪಿ ಗಣೇಶ ಮೂರ್ತಿ, ತ್ಯಾಜ್ಯ ತೆರವು!

'ವಿ ಆರ್ ಆರಂಭ್' (We Are Aarambh) ಎಂಬ ತ್ಯಾಜ್ಯ-ಮುಕ್ತ (zero-waste) ಪರಿಕಲ್ಪನೆಯ ಸ್ಟಾರ್ಟಪ್, ಭಾನುವಾರ ಈ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

ಬೆಂಗಳೂರು: ಸರ್ಜಾಪುರ ರಸ್ತೆಯ ಸಮೀಪವಿರುವ ಹಲನಾಯಕನಹಳ್ಳಿ ಕೆರೆಯಲ್ಲಿ ಗಣೇಶ ವಿಸರ್ಜನೆ ನಂತರ, ಯುವ ಸ್ವಯಂಸೇವಕರ ತಂಡವೊಂದು 700 ಕೆಜಿಗೂ ಹೆಚ್ಚು ತ್ಯಾಜ್ಯವನ್ನು ತೆರವುಗೊಳಿಸಿದೆ.

'ವಿ ಆರ್ ಆರಂಭ್' (We Are Aarambh) ಎಂಬ ತ್ಯಾಜ್ಯ-ಮುಕ್ತ (zero-waste) ಪರಿಕಲ್ಪನೆಯ ಸ್ಟಾರ್ಟಪ್, ಪರಿಸರ ಪರ ಸಂಘಟನೆಯಾದ 'ಟೀಮ್ ಸೋಶಿಯಲ್ ಸ್ಪಾಟ್‌ಲೈಟ್' (Team Social Spotlight) ಮತ್ತು ಇತರ ಸ್ಥಳೀಯ ಗುಂಪುಗಳ ಸಹಯೋಗದೊಂದಿಗೆ ಭಾನುವಾರ ಈ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

ಸ್ವಯಂಸೇವಕರು ಹೊರತೆಗೆದ ಒಟ್ಟು 720 ಕೆಜಿ ತ್ಯಾಜ್ಯದಲ್ಲಿ ಬರೋಬ್ಬರಿ 500 ಕೆಜಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳಾಗಿದ್ದರೆ, ಉಳಿದವು ಹಬ್ಬದ ತ್ಯಾಜ್ಯಗಳಾಗಿದ್ದವು. 50ಕ್ಕೂ ಹೆಚ್ಚು ಸ್ವಯಂಸೇವಕರನ್ನು ಒಳಗೊಂಡಿದ್ದ ಈ ತಂಡವು ಅರ್ಥ್‌ಮೂವರ್‌ಗಳು (ಭೂಮಿ ಅಗೆಯುವ ಯಂತ್ರಗಳು), ವಿಶೇಷ ಬಲೆಗಳು ಮತ್ತು ಕೈ ಉಪಕರಣಗಳ ಸಹಾಯದಿಂದ ತ್ಯಾಜ್ಯವನ್ನು ತೆರವುಗೊಳಿಸಿತು.

TNIE ಜೊತೆಗೆ ಮಾತನಾಡಿದ 'ಟೀಮ್ ಸೋಶಿಯಲ್ ಸ್ಪಾಟ್‌ಲೈಟ್'ನ ಸ್ಥಾಪಕ ಸೋನೇಶ್ ಕೆ. ಶೆಟ್ , ನಿಷೇಧವಿದ್ದರೂ, ಮಾರಾಟಗಾರರು ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದ್ದಾರೆ. ಪಿಒಪಿಯಿಂದಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಜನರು ಅವುಗಳನ್ನು ಖರೀದಿಸುತ್ತಿದ್ದಾರೆ. ಅಂತಿಮವಾಗಿ ಅವು ಕೆರೆಗಳನ್ನು ಸೇರುತ್ತವೆ. ಹೂವುಗಳು, ಪೂಜಾ ಸಾಮಗ್ರಿಗಳು ಮತ್ತು ಪ್ಲಾಸ್ಟಿಕ್‌ಗಳಂತಹ ಹಬ್ಬದ ತ್ಯಾಜ್ಯವನ್ನು ತೆಗೆದುಹಾಕುವುದು ಹಾಗೂ ಪಿಒಪಿ ಮೂರ್ತಿಗಳು ಕೆರೆಯಲ್ಲಿ ಉಳಿದು ಜಲಮೂಲದ ಮೇಲೆ ಪರಿಣಾಮ ಬೀರುವುದನ್ನು ತಡೆಯುವುದು ಈ ಅಭಿಯಾನದ ಉದ್ದೇಶವಾಗಿತ್ತು ಎಂದು ತಿಳಿಸಿದರು.

ನೀರಿನಲ್ಲಿ ವಿಸರ್ಜನೆ ಮಾಡಲಾಗಿದ್ದ 15ಕ್ಕೂ ಹೆಚ್ಚು ಮೂರ್ತಿಗಳನ್ನು ತಂಡವು ಹೊರತೆಗೆದಿದೆ. ಇದರಲ್ಲಿ 10 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯೂ ಸೇರಿದೆ. ಹೊರತೆಗೆದ ಪಿಒಪಿಯನ್ನು ಶಾಲಾ ಮಕ್ಕಳಿಗೆ ಬೇಕಾದ ಮೇಜು ಮತ್ತು ಕುರ್ಚಿಗಳನ್ನಾಗಿ ಪರಿವರ್ತಿಸುವ ಸಾಧ್ಯತೆಯನ್ನು ತಂಡವು ಪರಿಶೀಲಿಸುತ್ತಿದೆ ಎಂದು ಶೆಟ್ ತಿಳಿಸಿದರು.

ಹಲನಾಯಕನಹಳ್ಳಿ ಕೆರೆಗೆ ಯಾವುದೇ ಬೇಲಿ ಅಥವಾ ರಕ್ಷಣೆ ಇಲ್ಲ ಎಂದು ಹೇಳಿದ ಅವರು, ಕೆರೆಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. "ಹಬ್ಬಗಳು ನಮ್ಮ ಸಂಸ್ಕೃತಿ ಮತ್ತು ಸಮುದಾಯಗಳಿಗೆ ಚೈತನ್ಯ ನೀಡಬೇಕೇ ಹೊರತು, ನಮ್ಮ ಪರಿಸರವನ್ನು ಉಸಿರುಗಟ್ಟಿಸಬಾರದು. ನಾವು ಒಂದು ನಿಜವಾದ ಕ್ರಾಂತಿಯ ಆರಂಭವಾಗಲು ಬಯಸುತ್ತೇವೆ ಎಂದು 'ಆರಂಭ್' ತಂಡ ಹೇಳಿದೆ.

ನಮ್ಮ ನಗರವನ್ನು ರಕ್ಷಿಸುವುದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ; ಇದು ನಮ್ಮ ಭವಿಷ್ಯಕ್ಕಾಗಿ ನಾವು ಮಾಡಬೇಕಾದ ನಿರಂತರ ಬದ್ಧತೆ ಎಂದು ತಂಡ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJP ಸೋಲಿಸಲು ಮಾಸ್ಟರ್‌ ಪ್ಲ್ಯಾನ್; 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣು, ನಾಳೆಯಿಂದ ‘Bharat Jodo-2’ ಅಭಿಯಾನ ಆರಂಭ..!

ಮುಂಗಾರು ಮುಗಿಯುತ್ತಿದ್ದರೂ ಇನ್ನೂ ಕರುಣೆ ತೋರದ ವರುಣ: ಕಾವೇರಿ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ನೀರು!

ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ: ‘ಆರ್ಥಿಕ ಹೊರೆ ಇದೆ, ಆದರೂ ನಿಭಾಯಿಸುತ್ತೇವೆ’; ರಾಜ್ಯ ಸರ್ಕಾರ..!

ಮೇಕೆದಾಟು ಯೋಜನೆಗೆ ಡಿಕೆಶಿ ಬಿಗಿ ಪಟ್ಟು; ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ, ಸ್ಥಳ ಪರಿಶೀಲನೆಗೆ ತಮಿಳುನಾಡು ಸರ್ಕಾರಕ್ಕೆ ಮುಕ್ತ ಆಹ್ವಾನ..!

ಕರ್ನಾಟಕದ ಕಾಳಜಿ ಪರಿಗಣಿಸಿ, ಸಿಝಡ್‌ಎಂಪಿ-ಇಎಸ್‌ಎ ಗೊಂದಲ ಬಗೆಹರಿಸಿ; ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆ.ಶಿವಕುಮಾರ್ ಮನವಿ