ಆರನೇ ಕ್ಲಾಸು. ಟೀಚರ್ ಮಹಾಭಾರತದ ಪಾಠ ಬೋಧಿಸುತ್ತಿದ್ದರು.
'ಕಂಸನಿಗೆ ದೇವಕಿಯ 8ನೇ ಮಗುವಿನಿಂದ ತನ್ನ ಸಾವು ಎಂದು ಗೊತ್ತಾದ ತಕ್ಷಣ ದೇವಕಿ ಮತ್ತು ವಸುದೇವ ಇಬ್ಬರನ್ನೂ ಜೈಲಿಗೆ ಹಾಕಿದನು. ಮೊದಲನೇ ಮಗು ಹುಟ್ಟಿತು. ಕಂಸ ಅದನ್ನು ವಿಷ ತಿನ್ನಿಸಿ ಸಾಯಿಸಿದನು. ವರ್ಷದ ನಂತರ ಎರಡನೇ ಮಗು ಹುಟ್ಟಿತು. ಆ ಮಗುವನ್ನೂ ಕಂಸ ಕತ್ತಿಯಿಂದ ಇರಿದು ಕೊಂದ. ಮೂರನೇ ಮಗು...'
ಹೀಗೆ ಪಾಠ ಮಾಡುತ್ತಿದ್ದಾಗ ಕೊನೆ ಬೆಂಚಿನಿಂದ ಒಂದು ದನಿ ಬಂತು.
'ಟೀಚರ್... ಒಂದು ಡೌಟ್ ಇತ್ತು'.
ಟೀಚರ್: ಏನು ಕೇಳು.
ಲಾಸ್ಟ್‌ಬೆಂಚ್ ಹುಡುಗ: 8ನೇ ಮಗು ತನ್ನನ್ನು ಕೊಲ್ಲುತ್ತದೆ ಅಂತ ಗೊತ್ತಿದ್ದರೂ ಮೊದಲನೇ ಮಗುವನ್ನು, ಎರಡನೇ ಮಗುವನ್ನು. ಮೂರನೇ... ಹೀಗೆ ಆ ಮಕ್ಕಳನ್ನು ಕಂಸ ಕೊಂದಿದ್ಯಾಕೆ?
ಟೀಚರ್ ಉತ್ತರ ಹೇಳೋಕೆ ಆಗದೆ ಗಲಿಬಿಲಿಗೊಳ್ಳು ಮತ್ತೊಂದು ಪ್ರಶ್ನೆ ಬಂತು.
'ಟೀಚರ್... ಕಂಸ ದೇವಕಿಯ ಮಗನಿಂದ ತನಗೆ ಸಾವು ಅಂತ ಗೊತ್ತಿದ್ದ ಮೇಲೂ ಯಾಕೆ ವಸುದೇವ ಮತ್ತು ದೇವಕಿಯನ್ನು ಜೈಲಿನ ಒಂದೇ ಕೋಣೆಯಲ್ಲಿತ್ತಿದ್ದ?
ಟೀಚರ್ ಮೂರ್ಛೆ ಹೋಗಿದ್ದರು!
ಅಪಾರ್ಟ್‌ಮೆಂಟ್ ಸ್ಟೋರಿ
ಅವಳು: ನಿನ್ನೆ ರಾತ್ರಿ ನನ್ ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಹೋಗಿದ್ದೆ ಕಣೆ. ಅಬ್ಬಾ ಎಂಥ ಅನುಭವ! ಮರೆಯೋಕೆ ಸಾಧ್ಯ ಇಲ್ಲ!
ಇವಳು: ಹೌದಾ!? ಏನ್ ಏನ್ ನಡೀತು ಅಂತ ಹೇಳೇ ಪ್ಲೀಸ್...
ಅವಳು: ಅವ್ನು ಸೀದಾ ಅವನ ಅಪಾರ್ಟ್‌ಮೆಂಟಿಗೆ ಕರ್‌ಕೊಂಡ್ ಹೋದ. ನನ್ನ ತಬ್ಕೊಂಡು ಪ್ರೀತಿಯಿಂದ ಮುತ್ತು ಕೊಟ್ಟ. ಆಮೇಲೆ ಮೆಲ್ಲಗೆ ಅವನ ಕೈ ನನ್ನ ಹೆಗಲ ಮೇಲೆ ತಂದು... ನನ್ನ ದುಪಟ್ಟಾ ಎಳೆದ. ನಾನು ರೆಡ್ ಕಲರ್ ಚೂಡಿ ಹಾಕ್ಕೊಂಡಿದ್ದೆ. ಅದೇ ಲಾಸ್ಟ್ ವೀಕ್ ಮಂತ್ರಿ ಸ್ಕ್ವೇರಲ್ಲಿ ತಗೊಂಡಿದ್ನಲ್ಲ... ಅದು.
ಇವಳು: ಲಾಸ್ಟ್ ವೀಕ್ ಬಟ್ಟೆ ತಗೊಂಡ್ಯಾ? ನಂಗ್ ಗೊತ್ತೇ ಇರ್ಲಿಲ್ಲ!
ಅವಳು: ಹ್ಞೂಂ ಕಣೆ... ಅಲ್ಲಿ ಡಿಸ್ಕೌಂಟ್ ಸೇಲ್ ಹಾಕಿದ್ರು. ಅಲ್ಲೇ ಒಂದೆರಡು ಜೊತೆ ಜೀನ್ಸು, ಟಾಪ್ಸು ಕೂಡ ತಗೊಂಡೆ.
ಇವಳು: ನಂಗೂ ಕರೆಯೋದಲ್ವಾ..? ಇನ್ನೂ ಸೇಲ್ ನಡೀತಾ ಇದ್ಯಾ?
ಅವಳು: ಹ್ಞೂಂ. ಈಗ್ಲೂ ಇದೆ.
ಇವಳು: ಹಾಗಾದ್ರೆ ನಾನೂ ಒಂದಿಷ್ಟ್‌ಬಟ್ಟೆ ತಗೋತೀನಿ ಕಣೆ. ಒಂದ್ ನಿಮಿಷ ಇರು ರೆಡಿ ಆಗ್ತೀನಿ. ಇಬ್ರೂ ಹೋಗ್ ಬರೋಣ.
ಈ ಹುಡುಗೀರೇ ಹೀಗೆ. ಶಾಪಿಂಗ್ ಅಂದ್ರೆ ತಾವೇನು ಮಾತಾಡ್ತಾ ಇದ್ವಿ ಅನ್ನೋದನ್ನೂ ಮರೆತುಬಿಡ್ತಾರೆ. ಪಾಪ ಹುಡುಗ್ರು... ಅಪಾರ್ಟ್‌ಮೆಂಟಲ್ಲಿ ಮುಂದೇನಾಯ್ತು ಅಂತ ತಿಳ್ಕೊಳೋಕೆ ಕಾಯ್ತಾ ಇದ್ರು! ಛೆ, ನಿರಾಸೆ!!
ಜಾವಾ ಬಗ್ಗೆ...
ಕಂಪ್ಯೂಟರ್ ಕ್ಲಾಸಿನಲ್ಲಿ ಟೀಚರ್ ಗುಂಡನನ್ನು ಕೇಳಿದರು; 'ಜಾವಾ ಬಗ್ಗೆ ನಿನಗೇನು ಗೊತ್ತು ಹೇಳು?'.
ಗುಂಡ: ಬೆಳಗಿನ ಜಾವದ ಬಗ್ಗೆ ಗೊತ್ತು. ಆಗ ನಾ ಇನ್ನೂ ಎದ್ದಿರೋಲ್ಲ. ಜಾವ ಬೈಕ್ ಬಗ್ಗೆ ಗೊತ್ತು. ಆದ್ರೆ ಅದು ನನ್ ಹತ್ರ ಇಲ್ಲ. ಅದು ಬಿಟ್ರೆ ಹಿಂದಿ ಹಾಡಲ್ಲಿ ಕೇಳಿರೋ ಮರ್‌ಜಾವಾ... ಮಿಟ್‌ಜಾವಾ.. ಲುಟ್‌ಜಾವಾ- ಈ ಪದಗಳು ಗೊತ್ತು. ಅರ್ಥ ಗೊತ್ತಿಲ್ಲ.