ಗಿಡ ಬೆಳೆಯಲು ಬೇಕು ನೀರು
ಆಗ ಅದು ಬೆಳೆಯುವುದು ಜೋರು
ಅದು ಕೊಡುವುದು ನಮಗೆ ನೆರಳು
ಜೀವಿಗಳಿಗೆಲ್ಲಾ ಬೇಕು ನೀರು
ಅದಕೆ ನೀರು ಅಂದರೆ ದೇವರು
ಮಳೆರಾಯ ಕೊಟ್ಟಾಗ ನೀರು
ಹೊಲದಲ್ಲೆಲ್ಲಾ ಪೈರು
ನೀರು ಇಡುವುದು ನೆಲ ಹಸಿರು
ನೀರೇ ನಮ್ಮ ಉಸಿರು
ನೀರಿದ್ದರೆ ಬಾಯಿ ಮೊಸರು
ನೆಲದಲ್ಲಿರುವುದು ನೀರು
ಅದಕೆ ಹೊಡೆಯುವುದು ಬೋರು
ನೀರು ಸಿಕ್ಕರೆ ಬಾಳು
ಇಲ್ಲದೇ ಹೋದರೆ ಗೋಳು
ಅದಕೆ ನೀರು ಬೇಕು ನೀರು
-ಋತು. ಮ. ಕೊಪ್ಪ
8ನೇ ತರಗತಿ, ತುಂಗಳ ಪ್ರೌಢಶಾಲೆ, ಜಮಖಂಡಿ