ಲಂಕಾ ತಮಿಳರ ಮೇಲಿನ ದೌರ್ಜನ್ಯ ಖಂಡಿಸಿ ಕಾಲಿವುಡ್ ಪ್ರತಿಭಟನೆ
ಚೆನ್ನೈ: ಶ್ರೀಲಂಕಾ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳು ಚಿತ್ರೋದ್ಯಮ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಖ್ಯಾತ ನಟ ರಜನಿಕಾಂತ ಹಾಗು ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರ ರಂಗದ ನಟ-ನಟಿಯರು ಭಾಗವಹಿಸಿದ್ದಾರೆ.
ಶಾಂತಿಯುತ ಪ್ರತಿಭಟನೆಗೆ ಮುಂದಾಗಿರುವ ಕಲಾವಿದರು ಯಾವುದೇ ಭಾಷಣಗಳನ್ನು ಮಾಡದೆ ಮೌನದ ಮೂಲಕ ಪತ್ರಿಭಟಿಸುತ್ತಿದ್ದಾರೆ. ಇದು ದಿನದ ಸಾಂಕೇತಿಕ ಧರಣಿಯಾಗಿದ್ದು, ಸಂಜೆ 6 ಗಂಟೆವರೆಗೆ ನಡೆಯಲಿದೆ.
ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ(ಎಸ್ಐಎಫ್ಎಎ)ದ ಸದಸ್ಯರಾಗಿರುವ ಖ್ಯಾತ ನಟರಾದ ರಜನಿಕಾಂತ, ಕಮಲ ಹಾಸನ್, ಅಜಿತ್ ಕುಮಾರ್,ಶರತ್ ಕುಮಾರ್, ವಿಕ್ರಮ್, ಪ್ರಕಾಶ್ರಾಜ್, ಭಾಗ್ಯರಾಜ್, ಸೂರ್ಯ, ಕಾರ್ತಿಕ್, ಭರತ್, ಮತ್ತಿತರರು ಭಾಗವಹಿಸಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಇಂದು ಚಿತ್ರೋದ್ಯಮದ ಎಲ್ಲಾ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು, ಉದ್ಯಮದ ಎಲ್ಲಾ ಸದಸ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.