ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತಮಿಳು ದಿನಪತ್ರಿಕೆ ಕಚೇರಿ ಮೇಲೆ ದಾಳಿ

Vishwanath S
Updated On : 3 Apr 2013, 3:04 am

ಶ್ರೀಲಂಕಾ: ಶ್ರೀಲಂಕಾದ ಕಿಲಿನೋಚ್ಛಿಯಲ್ಲಿ ಉದ್ಯಾನ ತಮಿಳು ದಿನ ಪತ್ರಿಕೆ ಕಚೇರಿ ಮೇಲೆ ಅಪರಿಚಿತರ ಗುಂಪೊಂದು ದಾಳಿ ಮಾಡಿದ್ದು, ಘಟನೆಯಲ್ಲಿ ಉದ್ಯೋಗಿಗಳಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಿಲಿನೋಚ್ಛಿ ಗ್ರಾಮದಲ್ಲಿರುವ ಉದ್ಯಾನ ದಿನ ಪತ್ರಿಕೆಯ ಪ್ರಸರಣಾ ಕಚೇರಿಗೆ ನುಗ್ಗಿದ ಕಿಡಿಕೇಡಿಗಳ ಗುಂಪು ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಹೊಡೆದು ಹಾಕಿದ್ದು, ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಉದ್ಯೋಗಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳು ದಿನ ಪತ್ರಿಕೆಗಳ ಹಾಗು ಪತ್ರಕರ್ತರ ಮೇಲೆ ದಾಳಿಗಳಾಗುತ್ತಿರುವುದು ಇದೇ ಮೊದಲೆನಲ್ಲ, ಇಂತಹ ಘಟನೆ ಅನೇಕ ಸಲ ನಡೆದ ಪ್ರಕರಣಗಳು ದಾಖಲಾಗಿವೆ ಎಂದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಕಿಲಿನೋಚ್ಛಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement