ನರ್ಸ್ ಜಯಲಕ್ಷ್ಮಿ ಬಿಎಸ್ಆರ್ ಕಾಂಗ್ರೆಸ್ ಸೇರ್ಪಡೆ
ಇತ್ತೀಚೆಗಷ್ಟೇ ರಿಯಾಲಿಟಿ ಶೋ ಬಿಗ್ ಬಾಸ್ನಿಂದ ಹೊರಬಿದ್ದು ಸುದ್ದಿ ಮಾಡಿದ್ದ ನರ್ಸ್ ಜಯಲಕ್ಷ್ಮಿ ಅವರು ಬುಧವಾರ ಬಿಎಸ್ಆರ್ ಕಾಂಗ್ರೆಸ್ ..
ಬೆಂಗಳೂರು: ಇತ್ತೀಚೆಗಷ್ಟೇ ರಿಯಾಲಿಟಿ ಶೋ ಬಿಗ್ ಬಾಸ್ನಿಂದ ಹೊರಬಿದ್ದು ಸುದ್ದಿ ಮಾಡಿದ್ದ ನರ್ಸ್ ಜಯಲಕ್ಷ್ಮಿ ಅವರು ಬುಧವಾರ ಬಿಎಸ್ಆರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ನೇತೃತ್ವದಲ್ಲಿ ಜಯಲಕ್ಷ್ಮಿ ಅವರು ಪಕ್ಷ ಸೇರ್ಪಡೆಯಾದರು.
ಬಿಗ್ ಬಾಸ್ ಮನೆಯಲ್ಲಿ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಂಡಿದ್ದ ಜಯಲಕ್ಷ್ಮೀ ಇದೀಗ ಆ ಕನಸು ಸಕಾರಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ.