ಬಿಜೆಪಿಗೆ ಮಾನಪ್ಪ ವಜ್ಜಲ್ ಗುಡ್ಬೈ
ಬಿಜೆಪಿಯ ಮೊತ್ತೊಂದು ವಿಕೆಟ್ ಪತನವಾಗಿದ್ದು, ಪಕ್ಷ ತೊರೆಯುವುದಾಗಿ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರು ಹೇಳಿದ್ದಾರೆ.
ಬೆಂಗಳೂರು: ಬಿಜೆಪಿಯ ಮೊತ್ತೊಂದು ವಿಕೆಟ್ ಪತನವಾಗಿದ್ದು, ಪಕ್ಷ ತೊರೆಯುವುದಾಗಿ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರು ಬುಧವಾರ ಹೇಳಿದ್ದಾರೆ.
ಪಕ್ಷದಲ್ಲಿನ ಗೊಂದಲಗಳಿಂದ ಬೇಸತ್ತು ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಪಕ್ಷ ತೊರೆಯುತ್ತಿರುವುದಾಗಿ ವಜ್ಜಲ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಬೆಂಬಲಿಗರ ಸೂಚನೆಯಂತೆ ತಾವು ಜೆಡಿಎಸ್ ಸೇರುತ್ತಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಮಾನಪ್ಪ ವಜ್ಜಲ್ ಅವರು ಪಕ್ಷ ತೊರೆಯುತ್ತಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು, ಬಿಜೆಪಿಯಲ್ಲಿ ಮಾನಪ್ಪ ವಜ್ಜಲ್ ಲೆಕ್ಕಕ್ಕಿಲ್ಲ. ಅವರು ಈವರೆಗೂ ತಾಂತ್ರಿಕವಾಗಿ ಮಾತ್ರ ಪಕ್ಷದಲ್ಲಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ ಸಚಿವರಾದ ವಿ.ಸೋಮಣ್ಣ ಹಾಗೂ ಮುರುಗೇಶ್ ನಿರಾಣಿ ಅವರು ಪಕ್ಷದಲ್ಲಿ ಇರುತ್ತಾರೆ ಎಂದು ತಿಳಿಸಿದರು.