ಗುಂಡಿನ ಚಕಮಕಿ: 7ನಕ್ಸಲರ ಹತ್ಯೆ
ಮಹಾರಾಷ್ಟ್ಟ್ರ: ಗಡಿಚಿರೋಲಿ ಗ್ರಾಮದ ನರಗುಂದ-ಬಾತ್ಪರ್ ಅರಣ್ಯದಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 7 ನಕ್ಸಲರು ಗುರುವಾರ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ, ಛತ್ತಿಸ್‌ಘಡ್‌ನ ಗಡಿ ಭಾಗದ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆ ಹಾಗು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಯ ದಾಳಿಗೆ 7 ನಕ್ಸಲರು ಮೃತಪಟ್ಟಿದ್ದು, ಅವರ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆ ಅಧಿಕಾರಿ ತಿಳಿಸಿದ್ದಾರೆ.
ಗಡಿಚಿರೋಲಿ ಅರಣ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇನ್ನು ಹಲವು ನಕ್ಸಲರು ಅಡಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಭದ್ರತಾ ಪಡೆ, ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ.