ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿಯಲ್ಲೇ ಉಳಿದ ಸೋಮಣ್ಣ

ಕೆಜೆಪಿ ಸೇರಬೇಕೇ ಅಥವಾ ಬಿಜೆಪಿಯಲ್ಲೇ ಉಳಿಯಬೇಕೇ ಎಂಬ ಗೊಂದಲದಲ್ಲಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಕಡೆಗೂ ಗುರುವಾರ ..

Lingaraj Badiger
Updated On : 4 Apr 2013, 12:36 pm

ಬೆಂಗಳೂರು: ಕೆಜೆಪಿ ಸೇರಬೇಕೇ ಅಥವಾ ಬಿಜೆಪಿಯಲ್ಲೇ ಉಳಿಯಬೇಕೇ ಎಂಬ ಗೊಂದಲದಲ್ಲಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಕಡೆಗೂ ಗುರುವಾರ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದ್ದು, ನಾನು ಯಾವುದೇ ಕಾರಣಕ್ಕೂ ಮಾತೃ ಪಕ್ಷ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಗೋವಿಂದರಾಜನಗರದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸೋಮಣ್ಣ, ಬಿಜೆಪಿ ನನ್ನ ಮಾತೃ ಪಕ್ಷ, ನನ್ನ ನಿಷ್ಠೆ ಏನಿದ್ದರೂ ಬಿಜೆಪಿಗೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ಇದೇ ವೇಳೆ, ಗೋವಿಂದರಾಜನಗರ ನನ್ನ ಕ್ಷೇತ್ರ, ಇಲ್ಲಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಮತ್ತು ಇಲ್ಲೇ ಬೌಂಡರಿ ಸಿಕ್ಸರ್ ಹೊಡೆಯುವುದಾಗಿ ಸೋಮಣ್ಣ ಹೇಳಿದರು.

ಸೋಮಣ್ಣ ಬಿಜೆಪಿಯಲ್ಲೇ ಉಳಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಅವರಿಗೆ ದೇವರು ಒಳ್ಳೆಯದು ಮಾಡಲಿ, ಪಕ್ಷಕ್ಕೆ ಬರುವವರಿಗೆ ಸ್ವಾಗತ, ಬಾರದೇ ಇರುವವರ ಬಗ್ಗೆ ಬೇಸರವೇನೂ ಇಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement