ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಾ.ನಗರದಿಂದ 'ಸುಂಟರಗಾಳಿ', ರಾಯಚೂರಿನಲ್ಲಿ 'ಮುಂಗಾರು ಮಳೆ'

ವಿಧಾನಸಭಾ ಚುನಾವಣೆಗಾಗಿ ಬಿಎಸ್‌ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಾಲ್ಕನೆ ಪಟ್ಟಿ ಶುಕ್ರವಾರ ಬಿಡುಗಡೆ ಮಾಡಿದ್ದು,..

Lingaraj Badiger
Updated On : 5 Apr 2013, 11:54 am

ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಬಿಎಸ್‌ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಾಲ್ಕನೆ ಪಟ್ಟಿ ಶುಕ್ರವಾರ ಬಿಡುಗಡೆ ಮಾಡಿದ್ದು, ಚಾಮರಾಜನಗರದಿಂದ 'ಸುಂಟರಗಾಳಿ' ಖ್ಯಾತಿಯ ನಟಿ ರಕ್ಷಿತಾ ಹಾಗೂ 'ಮುಂಗಾರು ಮಳೆ' ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಇಂದು ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷೆ ಬಿ.ಶ್ರೀರಾಮುಲು ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇಬ್ಬರು ನಟಿಯರ ಹೆಸರಿದ್ದು, ಚಾಮರಾಜನಗರ ಹಾಗೂ ರಾಯಚೂರಿನಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಈ ಇಬ್ಬರು ನಣಿ ಮಣಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

ಇನ್ನು ನಿಪ್ಪಾಣಿಯಿಂದ ಬಾಬು ಸಾಹೇಬ್ ದೇಸಾಯಿ, ನರಸಿಂಹರಾಜನಗರದಿಂದ ಇಕ್ರಂ ಸಿದ್ದಿಕಿ, ರಾಮದುರ್ಗದಿಂದ ಪ್ರಕಾಶ್ ಮುಧೋಳ್‌ದಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement