ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಟಿಕೆಟ್ ನೀಡಲು ಎಚ್‌ಡಿಕೆ 5 ಕೋಟಿ ಕೇಳಿದ್ದರು: ಮುನೇಗೌಡ ಆರೋಪ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಜೆಡಿಎಸ್ ಟಿಕೆಟ್ ನೀಡಲು ತಮ್ಮ ಆಪ್ತರ ಮೂಲಕ ಐದು ಕೋಟಿ ರುಪಾಯಿ..

Lingaraj Badiger
Updated On : 5 Apr 2013, 4:02 am

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಜೆಡಿಎಸ್ ಟಿಕೆಟ್ ನೀಡಲು ತಮ್ಮ ಆಪ್ತರ ಮೂಲಕ ಐದು ಕೋಟಿ ರುಪಾಯಿ ಕೇಳಿದ್ದರು ಎಂದು ಟಿಕೆಟ್ ವಂಚಿತ ಬಿ.ಮುನೇಗೌಡ ಅವರು ಶುಕ್ರವಾರ ಆರೋಪಿಸಿದ್ದಾರೆ.

ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾನೆಸ್ಟ್ ಡೈನಾಮಿಕ್ ಕಿಂಗ್ ಆಗಿದ್ದರು. ಆದರೆ ಈಗ ಅವರು ಹೆವಿ ಡೀಲಿಂಗ್ ಕಿಂಗ್ ಆಗಿದ್ದಾರೆ ಎಂದು ದೊಡ್ಡಬಳ್ಳಾಪುರ ವಿಧನಾಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಎಚ್‌ಡಿಕೆ ಅವರ ಆಪ್ತ ಸಹಾಯಕ ವೆಂಕಟೇಶ್ ಅವರು ಟಿಕೆಟ್‌ಗಾಗಿ ಐದು ಕೋಟಿ ರುಪಾಯಿ ಡಿಮಾಂಡ್ ಮಾಡಿದ್ದರು. ಆದರೆ ನಾನು ಅಷ್ಟು ಕೊಡುವುದಕ್ಕೆ ಆಗಲ್ಲ. ಎರಡು ಕೋಟಿ ಕೊಡುತ್ತೇನೆ ಎಂದು ಹೇಳಿದ್ದೆ. ಅಲ್ಲದೆ 20 ದಿನಗಳ ಹಿಂದೆ ತಮಗೆ ಹಣ ನೀಡಲು ಹೇಳಿದ್ದರು ಎಂದು ಮುನೇಗೌಡ ಆರೋಪಿಸಿದ್ದಾರೆ.

ಇನ್ನು ದೊಡ್ಡಬಳ್ಳಾಪುರ ವಿಧಾಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಚೆನ್ನಿಗಪ್ಪ ಪಾಲಾಗಿದ್ದು, ಅದಕ್ಕಾಗಿ ಅವರು ಐದು ಕೋಟಿ ಕೊಟ್ಟಿದ್ದಾರೆ ಎಂದು ಸಹ ಮುನೇಗೌಡ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement