ದ್ರಾವಿಡ್‌ಗೆ ಪದ್ಮಭೂಷಣ, ಬಿ.ಜಯಶ್ರೀಗೆ ಪದ್ಮಶ್ರೀ ಪ್ರದಾನ
ದೆಹಲಿಯ ರಾಷ್ಟ್ರಪತಿ ಭವನದಲ್ಲಿ 2013ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ..
ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ 2013ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಹಾಗೂ ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ಬಿ.ಜಯಶ್ರೀ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಮೇರಿಕೋಮ್‌ಗೆ ಪದ್ಮಭೂಷಣ, ಬಾಲಿವುಡ್ ನಟಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ವಿಜ್ಞಾನಿ ರೊದ್ದಂ ನರಸಿಂಹ ಅವರಿಗೆ ಪದ್ಮವಿಭೂಷಣ ಸೇರಿದಂತೆ 108 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಣಬ್ ಮುಖರ್ಜಿ ಅವರು, ಒಟ್ಟು ನಾಲ್ಕು ಜನರಿಗೆ ಪದ್ಮವಿಭೂಷಣ, 24 ಜನರಿಗೆ ಪದ್ಮಭೂಷಣ ಹಾಗೂ 80 ಜನರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.