ಜನಸೇವೆಗಾಗಿ ಚಿತ್ರರಂಗ ಬಿಡಲು ಸಿದ್ಧ: ಪೂಜಾ ಗಾಂಧಿ
ಜನ ಸೇವೆಗಾಗಿ ತಾವು ಚಿತ್ರರಂಗ ಬಿಡಲು ಸಿದ್ಧ ಎಂದು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಟಿ ಪೂಜಾ ಗಾಂಧಿ..
ಬಳ್ಳಾರಿ: ಜನ ಸೇವೆಗಾಗಿ ತಾವು ಚಿತ್ರರಂಗ ಬಿಡಲು ಸಿದ್ಧ ಎಂದು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಟಿ ಪೂಜಾ ಗಾಂಧಿ ಅವರು ಶನಿವಾರ ಹೇಳಿದ್ದಾರೆ.
ಬಿಎಸ್ಆರ್ನಿಂದ ಬಿಸಿಲು ನಾಡು ರಾಯಚೂರಿನಲ್ಲಿ ಚುನಾವಣಾ ಕಣಕ್ಕಿಳಿದಿರುವ ಮಳೆ ಹುಡುಗಿ, ಚುನಾವಣೆಯಲ್ಲಿ ತಾವು ಗೆದ್ದರೆ ಸಾಯೋವರೆಗೆ ರಾಯಚೂರಿನಲ್ಲೇ ಇದ್ದು, ಜನ ಸೇವೆ ಮಾಡುವುದಾಗಿ ಹೇಳಿದ್ದಾರೆ.
ಕಳೆದ 7 ವರ್ಷಗಳಲ್ಲಿ ನಾನು ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದೇನೆ. ಅಲ್ಲದೇ ಕನ್ನಡದಲ್ಲಿ 35 ಸಿನಿಮಾ ಮಾಡುತ್ತೇನೆ. ಆದರೆ ಇದೀಗ ಚುನಾವಣೆಗೆ ಸ್ಪರ್ಧಿಸಿದ್ದು, ಈ ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿರುವೆ. ಈ ಸಂಬಂಧ ನಾನು ಚಿತ್ರರಂಗ ಬಿಡಲು ಸಿದ್ಧ ಎಂದು ಪೂಜಾ ಗಾಂಧಿ ಹೇಳಿದ್ದಾರೆ.