ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಥಾಣೆ ಕಟ್ಟಡ ಕುಸಿತ: ಸಾವಿನ ಸಂಖ್ಯೆ 72ಕ್ಕೇರಿಕೆ, ಓರ್ವನ ಬಂಧನ

ಮುಂಬೈ ಬಳಿಯ ಥಾಣೆಯಲ್ಲಿ ಗುರುವಾರ ಏಳಂತಸ್ತಿನ ಕಟ್ಟ ಕುಸಿದು ಬಿದ್ದ ಪರಿಣಾಮ, ಕಟ್ಟಡದಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಶನಿವಾರ 72ಕ್ಕೆ ಏರಿದೆ.

Lingaraj Badiger
Updated On : 6 Apr 2013, 5:55 am

ಥಾಣೆ: ಮುಂಬೈ ಬಳಿಯ ಥಾಣೆಯಲ್ಲಿ ಗುರುವಾರ ಏಳಂತಸ್ತಿನ ಕಟ್ಟ ಕುಸಿದು ಬಿದ್ದ ಪರಿಣಾಮ, ಕಟ್ಟಡದಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಶನಿವಾರ 72ಕ್ಕೆ ಏರಿದೆ.

ಕಟ್ಟಡದ ಅವಶೇಷಗಳಡಿ ಬದುಕುಳಿದವರಿಗಾಗಿ ಶುಕ್ರವಾರ ತಡರಾತ್ರಿಯವರೆಗೂ ಶೋಧ ಕಾರ್ಯ ಮುಂದುವರಿದಿತ್ತು, ಇಂದು ಬೆಳಗ್ಗೆ ಮತ್ತಷ್ಟು ಮೃತ ದೇಹಗಳು ಪತ್ತೆಯಾಗಿವೆ. ಘಟನೆಯಲ್ಲಿ 60ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಯಾವುದೇ ಪರವಾನಿಗೆ ಮತ್ತು ದಾಖಲೆಗಳಿಲ್ಲದೇ ಅನಧಿಕೃತವಾಗಿ ಈ ಕಟ್ಟ ನಿರ್ಮಿಸಲಾಗಿತ್ತು. ಈ ಸಂಬಂಧ ಆರೋಪಿ ಇಬ್ಬರು ಮಾಲೀಕರ ಪೈಕಿ ಓರ್ವನನ್ನು ಇಂದು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ತನಿಖೆಗೂ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement