ನಕ್ಸಲರಿಂದ ರೈಲ್ವೇ ಹಳಿ ಸ್ಪೋಟ
ಪಾಟ್ನಾ: ಜಾರ್ಖಾಂಡ್‌ನಲ್ಲಿ ನಡೆದ ನಕ್ಸಲರ ಹತ್ಯೆಗೆ ಪ್ರತಿಕಾರವಾಗಿ ನಕ್ಸಲರು ಶನಿವಾರ ಬಿಹಾರದಲ್ಲಿ ರೈಲ್ವೇ ಹಳಿಯನ್ನು ಸ್ಪೋಟಿಸಿದ್ದಾರೆ.
ತೃತೀಯ ಪ್ರಸ್ತುತಿ ಕಮಿಟಿ(ಟಿಪಿಸಿ) ಹಾಗು ನಕ್ಸಲರ ನಡುವೆ ಮಾರ್ಚ್ 27-28 ರಂದು ನಡೆದಿದ್ದ ಗುಂಡಿನ ಚಕಮಕಿಯಲ್ಲಿ 10 ನಕ್ಸಲರು ಮೃತಪಟ್ಟಿದ್ದರು. ಈ ಘಟನೆಗೆ ಪ್ರತಿಕಾರವಾಗಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಹಾಗು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದಾಗಿ ಬಿಹಾರದ ಪೂರ್ವ ಕೇಂದ್ರಿಯ ರೈಲ್ವೇ ವಿಭಾಗದ ಹಜಿಪುರ್-ಮುಜ್ಹಾಫರ್‌ಪುರ್ ನಡುವಣ ಸಂಪರ್ಕ ಕಲ್ಪಿಸುವ ರೈಲ್ವೇ ಹಳಿ ಸ್ಪೋಟಿಸಿದ್ದಾರೆ ಎಂದು ರೈಲ್ವೇ ಪೊಲೀಸ್ ಅಧಿಕಾರಿ ಯು.ಕೆ. ಶಾಹಿ ಹೇಳಿದ್ದಾರೆ.
ಸ್ಟೋಟದಿಂದಾಗಿ ರೈಲ್ವೇ ಹಳಿಗಳು ಛಿಧ್ರವಾಗಿದ್ದು, ಅವುಗಳನ್ನು ಸರಿ ಪಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹಜಿಪುರ್ ರೈಲ್ವೇ ಅಧಿಕಾರಿ ಹೇಳಿದ್ದಾರೆ.