ಲಂಕಾ: 26 ಭಾರತೀಯ ಮೀನುಗಾರರ ಬಂಧನ
ಶ್ರೀಲಂಕಾ: ಭಾರತೀಯ ಮೂಲದ 26 ಮೀನುಗಾರರನ್ನು ಲಂಕಾ ನೌಕಾಪಡೆ ಶನಿವಾರ ಬಂಧಿಸಿದೆ.
26 ಮೀನುಗಾರರು 5 ದೋಣಿಗಳ ಮೂಲಕ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ, ಅಕ್ರಮವಾಗಿ ಲಂಕಾ ಗಡಿ ಪ್ರವೇಶಿಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಲಂಕಾ ನೌಕಾಪಡೆಯ ಅಧಿಕಾರಿ ತಿಳಿಸಿದ್ದಾರೆ.
ಬಂಧಿಸಲ್ಪಟ್ಟಿರುವ ಮೀನುಗಾರರನ್ನು ಹೆಚ್ಚಿನ ವಿಚಾರಣೆಗಾಗಿ ಉತ್ತರ ಕೈತ್ಸ್ ದ್ವೀಪಕ್ಕೆ ಕರೆ ತರಲಾಗಿದೆ ಎಂದು ನೌಕಾಪಡೆ ವಕ್ತಾರ ಕೋಸಲ ವರ್ಣಕುಲಸೂರ್ಯ ಹೇಳಿದ್ದಾರೆ.
ಎರಡು ದೇಶದ ಮೀನುಗಾರರ ತಮ್ಮ ದೇಶದ ನಿರ್ದಿಷ್ಟ ಚೌಕಟ್ಟಿನೊಳಗೆ ಮೀನು ಹಿಡಿಯುವುದು ಸೂಕ್ತ ಇಲ್ಲವಾದರೆ ಎರಡು ದೇಶದ ನಡುವಣ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದಿದ್ದಾರೆ.