ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಥಾಣೆ ಕಟ್ಟಡ ಕುಸಿತ ಪ್ರಕರಣ 6 ಮಂದಿ ಬಂಧನ

ಥಾಣೆ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 74ಕ್ಕೇರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

Vishwanath S
Updated On : 7 Apr 2013, 5:17 am

ಮುಂಬೈ: ಥಾಣೆ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 74ಕ್ಕೇರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಕಟ್ಟಡದ ಮಾಲೀಕರಾದ ಜಮೀಲ್ ಖುರೇಶಿ ಹಾಗು ಸಲೀಂ ಶೇಖ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಿರುವ ಪೊಲೀಸರು, ಮತ್ತೊಬ್ಬ ಆರೋಪಿ ಅದ್ನನ್ ಶೇಖ್‌ನ ಪತ್ತೆಗಾಗಿ ಹುಡುಗಾಟ ನಡೆಸಿದ್ದಾರೆ.

'ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 74ಕ್ಕೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ' ಎಂದು ಭಾನುವಾರ ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಿಣದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶಕೊಟ್ಟ ಪಾಲಿಕೆ ಆಯುಕ್ತ ಚೌಹಾಣ್ ಹಾಗು ಕೆ.ಪಿ. ನಾಯ್ಕ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ.

ಥಾಣೆಯ ಪಾಲಿಕೆ ಆಯುಕ್ತ ದೀಪಕ್ ಚೌಹಾಣ್, ಸಹಾಯಕ ಪಾಲಿಕೆ ಆಯುಕ್ತ ಬಾಬಾಸಾಹೇಬ್ ಅಂದಲೆ, ಗುಮಾಸ್ತ ಕಿರಣ್ ಮಾಡ್ಕೆ ಹಾಗು ಮುನಿಸಿಪಲ್ ಕಾರ್ಪೊರೇಟರ್ ಹೀರಾ ಪಾಟೀಲ್‌ರನ್ನು ಥಾಣೆ ಮುನಿಸಿಪಲ್ ಕಾರ್ಪೊರೇಷನ್ ವಜಾಮಾಡಿದೆ ಎಂದು ತಿಳಿದುಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement