ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕುಂದ ಜೋಡಿ ಕೊಲೆ ಪ್ರಕರಣ ಇಬ್ಬರ ಬಂಧನ: ಸಿಬಿಐ

Vishwanath S
Updated On : 8 Apr 2013, 5:51 am

ಲಖನೌ: ಭಾರೀ ಕುತೂಹಲ ಕೆರಳಿಸಿದ್ದ ಕುಂದ ಜಿಲ್ಲೆಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಇಬ್ಬರನ್ನು ಬಲಿಪುರ್ ಗ್ರಾಮದಲ್ಲಿ ಬಂಧಿಸಿದ್ದಾರೆ

 ಕುಂದ ಜಿಲ್ಲೆಯಲ್ಲಿ ಮಾರ್ಚ್ 2 ರಂದು ಪ್ರತಾಪ್‌ಘರ್ ಗ್ರಾಮದ ಹಿರಿಯ ಮುಖಂಡರಾದ ನಾನ್ಹಿ ಮತ್ತು ಸುರೇಶ್ ಯಾದವ್‌ರನ್ನು ಬರ್ಭರವಾಗಿ ಕೊಂದು ತಲೆ ಮರೆಸಿಕೊಂಡಿದ್ದ ಅಜಯ್ ಹಾಗು ವಿಜಯ್ ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ಜಿಯಾ-ಉಲ್-ಹಕ್ ಹೇಳಿದ್ದಾರೆ.

ಕೊಲೆಗೆ ಬಳಸಲಾಗಿದ್ದ ನಾಡ ಪಿಸ್ತೂಲ್ ಶೆಲ್ಸ್‌ಗಳು ಹಾಗು ಕೊಲೆಗೆ ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್, ಸಿಮ್‌ಕಾರ್ಡ್‌ಗಳನ್ನು ಸಿಬಿಐ ವಶಪಡಿಸಿಕೊಂಡಿದ್ದು, ಇವುಗಳೇ ಕೊಲೆಗೆ ಪ್ರಮುಖ ಸಾಕ್ಷಿಗಳಾಗಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement