ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈ ಕೋರ್ಟ್‌ಗೆ ಶರಣಾದ ಕ್ರಿಕೆಟಿಗ ಪರ್ನೆಲ್

Vishwanath S
Updated On : 8 Apr 2013, 5:50 am

ಮುಂಬೈ: ಮುಂಬೈ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವ್ಯಾನ್ ಪರ್ನೆಲ್ ಸೋಮವಾರ ಮುಂಬೈನ ಸೆಷನ್ಸ್ ಕೋರ್ಟ್ ಮುಂದೆ ಶರಣಾಗಿದ್ದಾರೆ.

ವ್ಯಾನ್ ಅವರನ್ನು ವಿಚಾರಣೆ ನಡೆಸಿದ ಕೋರ್ಟ್, ಬಳಿಕ 10 ಸಾವಿರ ರುಪಾಯಿ ಮೊತ್ತದ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ.

ಕಳೆದ ವರ್ಷ ಮೇನಲ್ಲಿ ಮುಂಬೈ ಉಪನಗರದ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ರೇವ್ ಪಾರ್ಟಿಯಲ್ಲಿ ತೊಡಗಿಕೊಂಡಿದ್ದ ಐಪಿಲ್ ಆಟಗಾರರಾದ ರಾಹುಲ್ ಶರ್ಮಾ, ವ್ಯಾನ್ ಪರ್ನೆಲ್, ನಟಿರಾದ ಅಪೂರ್ವ ಅಗ್ನಿಹೊತ್ರಿ ಹಾಗು ಶಿಲ್ಪ ಅಗ್ನಿಹೊತ್ರಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮುಂಬೈ ಪೊಲೀಸರು ಈ ಆರೋಪಿಗಳ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement