ಪ.ಬಂಗಾಳ ಸಚಿವರ ಮೇಲೆ ಎಸ್ಎಫ್ಐ ಕಾರ್ಯಕರ್ತರ ದಾಳಿ
ಎಸ್ಎಫ್ಐ ಮುಖಂಡನ ಸಾವಿನ ಪ್ರಕರಣದಿಂದ ಆಕ್ರೋಶಿತ ಎಸ್ಎಫ್ಐ ಕಾರ್ಯಕರ್ತರು ಮಂಗಳವಾರ ಪಶ್ಚಿಮ ಬಂಗಾಳ ಹಣಕಾಸು ಸಚಿವರ..
ನವದೆಹಲಿ: ಎಸ್ಎಫ್ಐ ಮುಖಂಡನ ಸಾವಿನ ಪ್ರಕರಣದಿಂದ ಆಕ್ರೋಶಿತ ಎಸ್ಎಫ್ಐ ಕಾರ್ಯಕರ್ತರು ಮಂಗಳವಾರ ಪಶ್ಚಿಮ ಬಂಗಾಳ ಹಣಕಾಸು ಸಚಿವರ ಮೇಲೆ ದಾಳಿ ಮಾಡಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಭೇಟಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರೊಂದಿಗೆ ದೆಹಲಿಯ ಯೋಜನಾ ಭವನಕ್ಕೆ ಆಗಮಿಸುತ್ತಿದ್ದ ಹಣಕಾಸು ಸಚಿವ ಅಮಿತ್ ಮಿತ್ರಾ ಅವರ ಮೇಲೆ ಎಸ್ಎಫ್ಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಘಟನೆಯಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಅವರು, ಭದ್ರತಾ ವ್ಯವಸ್ಥೆ ಸಂಬಂಧ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಘಟನೆಯ ಹಿಂದೆ ಎಡರಂಗದ ಕೈವಾಡ ಇದೆ ಎಂದು ಆರೋಪಿಸಿದ ಮಮತಾ, ಪಶ್ಚಿ ಬಂಗಾಳದಲ್ಲಿ ಎಡರಂಗ ಮತ್ತೆ ಯಾವತ್ತು ಅಧಿಕಾರಕ್ಕೆ ಬರಲ್ಲ. ಎಡ ಪಕ್ಷಗಳು ಕೆಟ್ಟ ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದರು.