ಎಂಬಿಬಿಎಸ್ ಪರೀಕ್ಷೆ ಮುಂದೂಡಿಕೆ
ನವದೆಹಲಿ: ರಾಜ್ಯದಲ್ಲಿ ಮೇ 5ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಿಂದಾಗಿ ಎಂಬಿಬಿಎಸ್ ಪರೀಕ್ಷೆಯನ್ನು ಮೇ 18 ಮುಂದೂಡಲಾಗಿದೆ.
ವೈದ್ಯಕೀಯ ಪದವಿಗೆ ಅರ್ಹತೆ ಪಡೆಯಲು ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ಎನ್ಇಇಟಿ)ಯನ್ನು ರಾಜ್ಯ ವಿಧಾನಸಭೆ ಚುನಾವಣೆಯಿಂದಾಗಿ ಮುಂದೂಡಲಾಗಿದ್ದು, ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುಮತಿ ನೀಡಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್ಸಿ) ತಿಳಿಸಿದೆ.
ಸಿಬಿಎಸ್ಸಿಯು ಕಳೆದ ಸೆಪ್ಟೆಂಬರ್ನಲ್ಲೇ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿತ್ತು. ರಾಜ್ಯದಲ್ಲಿ ಮೇ 5 ರಂದು ಚುನಾವಣೆ ನಡೆಯುವುದರಿಂದ ಅಂದು ನಡೆಯಬೇಕಿದ್ದ ಎಂಬಿಬಿಎಸ್ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ.
ಉಳಿದಂತೆ ಬೇರೆ ರಾಜ್ಯಗಳಲ್ಲಿ ನಿಗದಿಯಾದ ದಿನಾಂಕದಂದೆ ಪರೀಕ್ಷೆಗಳು ನಡೆಯಲಿವೆ ಎಂದು ಬೋರ್ಡ್ ಸ್ಪಷ್ಟಪಡಿಸಿದೆ.
ಇದೇ ಮೊದಲ ಬಾರಿಗೆ ರಾಷ್ಟ್ರಾದ್ಯಂತ ಎಂಬಿಬಿಎಸ್ ಹಾಗು ಬಿಡಿಎಸ್ ಪದವಿಗಳಿಗೆ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಳುವ ನಿರೀಕ್ಷೆ ಇದೆ ಎಂದು ಬೋರ್ಡ್ ತಿಳಿಸಿದೆ.