'ನನ್ನ ಜೀವಕ್ಕೆ ಅಪಾಯವಿದೆ': ನಾಪತ್ತೆಯಾದ ನಟಿ ಅಂಜಲಿ ಅಳಲು
'ನನ್ನ ಜೀವಕ್ಕೆ ಅಪಾಯ ಎದುರಾಗಿದೆ' ಎಂದು ತಮ್ಮ ಚಿಕ್ಕಮ ಭಾರತಿ ದೇವಿ ಹಾಗೂ ನಿರ್ದೇಶಕ ಕಲಾಂಜಿಯಮ್ ಕಿರುಕುಳಕ್ಕೆ ಹೆದರಿ ..
ಹೈದರಾಬಾದ್: 'ನನ್ನ ಜೀವಕ್ಕೆ ಅಪಾಯ ಎದುರಾಗಿದೆ' ಎಂದು ತಮ್ಮ ಚಿಕ್ಕಮ ಭಾರತಿ ದೇವಿ ಹಾಗೂ ನಿರ್ದೇಶಕ ಕಲಾಂಜಿಯಮ್ ಕಿರುಕುಳಕ್ಕೆ ಹೆದರಿ ನಾಪತ್ತೆಯಾಗಿರುವ ದಕ್ಷಿಣ ಭಾರತದ ಬಹುಭಾಷಾ ನಟಿ ಅಂಜಿಲಿ ರಹಸ್ಯ ಸ್ಥಳದಿಂದ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನನ್ನ ಚಿಕ್ಕಮ್ಮ ಎಂದು ಹೇಳಲಾಗುತ್ತಿರುವ ಭಾರತಿ ದೇವಿ ನನ್ನ ನಿಜವಾದ ತಾಯಿ ಅಲ್ಲ. ಅವರಿಂದ ನನಗೆ ಅಪಾಯ ಎದುರಾಗಿದೆ. ಅವರು ನನ್ನನ್ನು ಎಟಿಎಂ ತರ ಬಳಸಿಕೊಂಡರು ಎಂದು ಅಂಜಲಿ ಆರೋಪಿಸಿದ್ದಾರೆ.
ಹಲವು ಚಿತ್ರಗಳಲ್ಲಿ ನಟಿಸುವಂತೆ ನನಗೆ ಅವರು ಒತ್ತಡ ಹೇರುತ್ತಿದ್ದರು. ಅಲ್ಲದೆ ನನ್ನ ನಿಜವಾದ ತಂದೆ, ತಾಯಿ ವಿವರ ಕೊಟ್ಟರೆ ಅವರನ್ನು ಕೊಲ್ಲುತ್ತಾರೆ ಎಂದು ಅಂಜಲಿ ದೂರಿದ್ದಾರೆ.
ಕಳೆದ ಸೋಮವಾರದಿಂದ ಅಂಜಲಿ ನಾಪತ್ತೆಯಾಗಿದ್ದು, ಈ ಸಂಬಂಧ ಹೈದರಾಬಾದ್ನ ಜುಬಿಲಿ ಹಿಲ್ಸ್ ಠಾಣೆಯಲ್ಲಿ ಅಂಜಲಿ ಅಣ್ಣ ರವಿ ಶಂಕರ್ ಅವರು ದೂರು ದಾಖಲಿಸಿದ್ದಾರೆ.
ಈ ಮಧ್ಯೆ, ರಹಸ್ಯ ಸ್ಥಳದಿಂದ ಮಾಧ್ಯಮಕ್ಕೆ ಮಾತನಾಡಿರುವ ಅಂಜಲಿ, ಬೆಂಗಳೂರಿನಲ್ಲೇ ಇರುವ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬೋಲ್ಬಚ್ಚನ್ ಚಿತ್ರದ ಚಿತ್ರೀಕರಣಕ್ಕೆ ಅಂಜಲಿ ಗೈರಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.