ಸಿಪಿಎಂ ನಾಯಕರು ವಂಚಕರು: ಮಮತಾ
ಮಂಗಳವಾರ ದೆಹಲಿಯ ಯೋಜನಾ ಆಯೋಗ ಕಚೇರಿಯ ಆವರಣದಲ್ಲಿ ತಮ್ಮನ್ನು ಹಾಗು ಟಿಎಂಸಿ ಸಚಿವ ಅಮಿತ್ ಮಿಶ್ರಾ ಅವರನ್ನು ...
ಕೊಲ್ಕತ್ತಾ: ಮಂಗಳವಾರ ದೆಹಲಿಯ ಯೋಜನಾ ಆಯೋಗ ಕಚೇರಿಯ ಆವರಣದಲ್ಲಿ ತಮ್ಮನ್ನು ಹಾಗು ಟಿಎಂಸಿ ಸಚಿವ ಅಮಿತ್ ಮಿಶ್ರಾ ಅವರನ್ನು ಸಿಪಿಎಂ ಬೆಂಬಲಿತ ಪೊಲೀಸರು ಕೈಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೂರಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ, ಸಿಪಿಎಂ ಬೆಂಬಲಿತ ಪೊಲೀಸರು ನನ್ನ ಮೇಲೆ ಕೈಮಾಡಿದ್ದಾರೆ. ಪೊಲೀಸರು ನನ್ನನ್ನು ಯೋಜನಾ ಆಯೋಗದ ಕಚೇರಿಯೊಳಗೆ ಪ್ರವೇಶಿಸಲು ಬಿಡಲಿಲ್ಲ. ಇದನ್ನೆಲ್ಲಾ ಹೇಗೆ ಯೋಜನೆ ಮಾಡಿಕೊಂಡರು ಎಂಬುದೇ ನನಗೆ ತಿಳಿಯುತ್ತಿಲ್ಲ.
ಈ ಎಲ್ಲದರ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ. ನನ್ನ ಪಕ್ಷದ ಕಾರ್ಯಕರ್ತರು ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಪಿಎಂ ಬೆಂಬಲಿತ ಪೊಲೀಸರು ನೂಕು ನುಗ್ಗಾಟ ನಡೆಸಿದ್ದಾರೆ. ಇದಕ್ಕೆಲ್ಲ ಕಾರಣರಾದ ಸಿಪಿಎಂ ನಾಯಕರು ವಂಚಕರು ಎಂದು ಮಮತಾ ಹೇಳಿದ್ದಾರೆ.
ಸದ್ಯ ತನ್ನ ಆರೋಗ್ಯ ಸರಿಯಿಲ್ಲದಿರುವುದರಿಂದ ನಾನು ಕೊಲ್ಕತ್ತಾಗೆ ಮರಳುತ್ತೇನೆ. ಮುಂದೊಂದು ದಿಮನ ನಾನು ದೆಹಲಿಗೆ ಬರುತ್ತೇನೆ ಎಂದು ಮಮತಾ ಮಾಧ್ಯಮದವರಲ್ಲಿ ಹೇಳಿದ್ದಾರೆ.
ನಾನೀಗ ಕೊಲ್ಕತ್ತಾಗೆ ವಾಪಾಸಾಗುತ್ತಿದ್ದೇನೆ. ಅದೇ ವೇಳೆ ದೆಹಲಿ ಸುರಕ್ಷಿತವಲ್ಲ ಎಂಬ ಮಾತನ್ನು ಹೇಳಲಿಚ್ಛಿಸುತ್ತೇನೆ ಎಂದು ಮಮತಾ ನುಡಿದಿದ್ದಾರೆ.