ಅಣ್ಣಾವ್ರ ಸ್ಮರಣೆ
ವರನಟ ಡಾ.ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಏಳು ವರ್ಷ ಕಳೆದಿವೆ. ಆದರೆ ಇಂದಿಗೂ ಅವರು ತಮ್ಮ ಚಿತ್ರಗಳ ಮೂಲಕ ..
ಬೆಂಗಳೂರು: ವರನಟ ಡಾ.ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಏಳು ವರ್ಷ ಕಳೆದಿವೆ. ಆದರೆ ಇಂದಿಗೂ ಅವರು ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರಾಗಿಯೇ ಉಳಿದಿದ್ದಾರೆ.
ಇಂದು ಡಾ.ರಾಜ್ಕುಮಾರ್ ಅವರ ಏಳನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಪಾರ್ವತಮ್ಮ ಅವರು ರಾಜ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಅಣ್ಣಾವ್ರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳ ದಂಡೆ ಸಮಾಧಿ ಬಳಿಗೆ ಹರಿದು ಬರುತ್ತಿದೆ.