ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಅನೈತಿಕ ಸಂಬಂಧವೇ ದೀಪಕ್ ಭಾರದ್ವಾಜ್ ಹತ್ಯೆಗೆ ಕಾರಣ'

ದೆಹಲಿ ಪೊಲೀಸರು ಇತ್ತೀಚಿಗೆ ಹತ್ಯೆಯಾದ ಬಿಎಸ್ಪಿ ಮುಖಂಡ ಹಾಗೂ ಉದ್ಯಮಿ ದೀಪಕ್ ಭಾರದ್ವಾಜ್ ಪ್ರಕರಣವನ್ನು ಭೇದಿಸಿದ್ದು, ಅನೈತಿಕ..

Lingaraj Badiger
Updated On : 12 Apr 2013, 1:32 am

ನವದೆಹಲಿ: ದೆಹಲಿ ಪೊಲೀಸರು ಇತ್ತೀಚಿಗೆ ಹತ್ಯೆಯಾದ ಬಿಎಸ್ಪಿ ಮುಖಂಡ ಹಾಗೂ ಉದ್ಯಮಿ ದೀಪಕ್ ಭಾರದ್ವಾಜ್ ಪ್ರಕರಣವನ್ನು ಭೇದಿಸಿದ್ದು, ಅನೈತಿಕ ಸಂಬಂಧ ದೀಪಕ್ ಹತ್ಯೆಗೆ ಪ್ರಮುಖ ಕಾರಣ ಎಂದು ವರದಿಗಳು ಶುಕ್ರವಾರ ತಿಳಿಸಿವೆ.

ದೆಹಲಿ ಪೊಲೀಸರ ಪ್ರಕಾರ, ಜನವರಿಯಲ್ಲೇ ದೀಪಕ್ ಭಾರದ್ವಾಜ್ ಕಿರಿಯ ಪುತ್ರ ನಿತೇಶ್, ಆತನ ಪತ್ನಿ ರಮೇಶ್ ಕುಮಾರಿ ಹಾಗೂ ವಕೀಲ ಬಲಜೀತ್ ಹತ್ಯೆಗೆ ಸಂಚು ರೂಪಿಸಿದ್ದರು ಮತ್ತು ಈ ಸಂಬಂಧ ಸ್ವಾಮಿ ಪ್ರತಿಭಾನಂದರನ್ನು ಭೇಟಿ ಮಾಡಿದ್ದರು.

ಉತ್ತರಖಂಡದ ಮಹಿಳೆಯೊಂದಿಗೆ ಬಿಎಸ್ಪಿ ಮುಖಂಡ ದೀಪಕ್ ಭಾರದ್ವಾಜ್ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಮತ್ತು ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ ಎಂಬ ಸಂಗತಿಯೇ ಹತ್ಯೆಗೆ ಕಾರಣ ಎನ್ನಲಾಗಿದೆ.

ದೀಪಕ್ ಒಂದು ವೇಳೆ ಉತ್ತರಖಂಡದ ಮಹಿಳೆಯನ್ನು ಮದುವೆಯಾದರೆ, ಆತನ ಕೋಟ್ಯಾಂತರ ರುಪಾಯಿ ಆಸ್ತಿ ತಮ್ಮ ಕೈ ತಪ್ಪುತ್ತದೆ ಎಂಬ ಭಯ ಪುತ್ರ ನಿತೇಶ್ ಹಾಗೂ  ಪತ್ನಿ ರಮೇಶ್ ಕುಮಾರಿಯನ್ನು  ಕಾಡುತ್ತಿತ್ತು ಎಂಬುದು ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.

ದೀಪಕ್ ಹತ್ಯೆ ಪ್ರಕರಣ ಸಂಬಂಧ ಪುತ್ರ ನಿತೇಶ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತನನ್ನು ಏಪ್ರಿಲ್ 15ರವರೆಗೆ ಕೋರ್ಟ್ ಪೊಲೀಸ್ ವಶಕ್ಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement