ಅಕ್ರಮವಾಗಿ ಸಾಗಿಸುತ್ತಿದ್ದ ರು.1.66ಕೋಟಿ ವಶ
ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.66 ಕೋಟಿ ರುಪಾಯಿ ನಗದನ್ನು ನೆಲಮಂಗಲ ತಾಲೂಕಿನ...
ಬೆಂಗಳೂರು: ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.66 ಕೋಟಿ ರುಪಾಯಿ ನಗದನ್ನು ನೆಲಮಂಗಲ ತಾಲೂಕಿನ ಜಾಸ್‌ಟೋಲ್ ಬಳಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ತಹಶೀಲ್ದಾರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಇಂದು ನಡೆದ ದಾಳಿಯಲ್ಲಿ ಈ ಭಾರಿ ಮೊತ್ತದ ಹಣ ಜಪ್ತಿ ಮಾಡಲಾಗಿದ್ದು, ಎರಡು ಟಾಟಾ ಸುಮೊದಲ್ಲಿ ಸಾಗಿಸುತ್ತಿದ್ದ 1 ಕೋಟಿ 66 ಲಕ್ಷ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹಣ ಸಾಗಿಸುತ್ತಿದ್ದ 8 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ವಿಚಾರಣೆ ವೇಳೆ, ಈ ಹಣ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸೇರಿದ್ದು, ಇದನ್ನು ತುಮಕೂರು ಹಾಗೂ ನೆಲಮಂಗಲ ಶಾಖೆಗಳಿಗೆ ನೀಡಲು ತಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಆ ಬಗ್ಗೆ ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.