ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಮೆರಿಕದಲ್ಲಿ ಅವಳಿ ಸ್ಫೋಟ: 3 ಸಾವು, 140 ಜನಕ್ಕೆ ಗಾಯ

ಉಗ್ರರು ಮತ್ತೆ ಅಮೆರಿಕದಲ್ಲಿ ಬಾಂಬ್ ದಾಳಿ ಮಾಡಿದ್ದು, ಬೋಸ್ಟನ್‌ನಲ್ಲಿ ಎರಡು ಪ್ರಬಲ ಬಾಂಬ್ ಸ್ಫೋಟಗೊಂಡಿವೆ. ಘಟನೆಯಲ್ಲಿ ಮೂವರು..

Lingaraj Badiger
Updated On : 16 Apr 2013, 6:41 am

ಬೋಸ್ಟನ್: ಉಗ್ರರು ಮತ್ತೆ ಅಮೆರಿಕದಲ್ಲಿ ಬಾಂಬ್ ದಾಳಿ ಮಾಡಿದ್ದು, ಬೋಸ್ಟನ್‌ನಲ್ಲಿ ಎರಡು ಪ್ರಬಲ ಬಾಂಬ್ ಸ್ಫೋಟಗೊಂಡಿವೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 140ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ.

ಅಮೆರಿಕದ ಕಾಲಮಾನ ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಬೋಸ್ಟನ್‌ನಲ್ಲಿ ಮ್ಯಾರಥನ್ ನಡೆಯುತ್ತಿದ್ದ ವೇಳೆ ಅವಳಿ ಬಾಂಬ್ ಸ್ಫೋಟಗೊಂಡಿವೆ. ಇದು ಉಗ್ರರ ಕೃತ್ಯ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಂತರ ಅಮೆರಿಕಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ ಮತ್ತು ಘಟನೆಯ ಬಗ್ಗೆ ಎಫ್‌ಬಿಐ ತನಿಖೆ ಆರಂಭಿಸಿದೆ.

ಇನ್ನು ಘಟನೆಯ ಸಂಬಂಧ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಅವರು, ಘಟನೆಯ ಹಿಂದೆ ಯಾರ ಕೈವಾಡ ಇದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಯಾರೇ ಆಗಿದ್ದರೂ ಸರಿ ಅವರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದಿದ್ದಾರೆ.

ಅಮೆರಿಕದಲ್ಲಿ ಲಾಡೆನ್ ದಾಳಿಯ ನಂತರ 12 ವರ್ಷಗಳ ಬಳಿಕ ಉಗ್ರರು ಮತ್ತೆ ತಮ್ಮ ದುಷ್ಕೃತ್ಯ ಎಸಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement