ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಮೆರಿಕದಲ್ಲಿ ಮತ್ತೆ ಸ್ಫೋಟ: 70 ಸಾವು

ಬೋಸ್ಟನ್ ಮ್ಯಾರಥಾನ್ ವೇಳೆ ಸಂಭವಿಸಿದ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೆ ಅಮೆರಿಕದ ಟೆಕ್ಸಾಸ್‌ನ ವಾಕೋ ಹೊರವಲಯದಲ್ಲಿರುವ ರಾಸಾಯನಿಕ..

Lingaraj Badiger
Updated On : 18 Apr 2013, 1:04 am

ಟೆಕ್ಸಾಸ್: ಬೋಸ್ಟನ್ ಮ್ಯಾರಥಾನ್ ವೇಳೆ ಸಂಭವಿಸಿದ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೆ ಅಮೆರಿಕದ ಟೆಕ್ಸಾಸ್‌ನ ವಾಕೋ ಹೊರವಲಯದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 70 ಜನ ಮೃತಪಟ್ಟಿದ್ದಾರೆ ಮತ್ತು 100ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೆಸ್ಚ್ ಫರ್ಟಿಲೈಸರ್ ಕಂಪನಿಯ ಸ್ಥಾವರದಲ್ಲಿ ಅಮೆರಿಕದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಈ ಭಾರಿ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದ ಸದ್ದು ಸುಮಾರು 72 ಕಿ.ಮಿ.ವರೆಗೆ ಕೇಳಿಸಿದೆ ಎಂದು ವರದಿಗಳು ಹೇಳಿವೆ.

ಸ್ಥಳಕ್ಕೆ ಅಗ್ನಿ ಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸ್ಫೋಟಕ್ಕೆ ಕಾರಣಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ ಅನ್‌ಹೈಡ್ರಸ್ ಅಮೋನಿಯಾ ಸ್ಫೋಟಗೊಂಡಿದೆ ಎಂದು ವಾಕೋ ಅಗ್ನಿ ಶಾಮಕ ವಿಭಾಗದ ಸಹಾಯಕ ಮುಖ್ಯಸ್ಥ ಡಾನ್ ಯೀಗರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement