ಮುಷರ್ರಫ್ ಬಂಧನಕ್ಕೆ ಪಾಕ್ ಕೋರ್ಟ್ ಆದೇಶ
ನ್ಯಾಯಾಧೀಶರ ನೇಮಕಾತಿಯಲ್ಲಿನ ಅವ್ಯವಹಾರ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರ ಬಂಧನಕ್ಕೆ..
ಇಸ್ಲಾಮಾಬಾದ್: ನ್ಯಾಯಾಧೀಶರ ನೇಮಕಾತಿಯಲ್ಲಿನ ಅವ್ಯವಹಾರ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರ ಬಂಧನಕ್ಕೆ ಪಾಕಿಸ್ತಾನದ ಕೋರ್ಟ್ ಗುರುವಾರ ಆದೇಶಿಸಿದೆ.
2007ರ ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮುಷರ್ರಫ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಇಸ್ಲಾಮಾಬಾದ್ ಹೈಕೋರ್ಟ್, ಮುಷರ್ರಫ್ ಬಂಧನಕ್ಕೆ ಆದೇಶಿಸಿದೆ. ಈ ವೇಳೆ ಕೋರ್ಟ್ ಹಾಲ್ನಲ್ಲಿದ್ದ ಮುಷರ್ರಫ್ ಬಂಧನದಿಂದ ತಪ್ಪಿಸಿಕೊಳ್ಳಲು ದಿಢೀರ್ನೇ ತಮ್ಮ ಬುಲೆಟ್ಪ್ರೂಫ್ ಕಾರ್ ಹತ್ತಿ ಪರಾರಿಯಾಗಿದ್ದಾರೆ.
ಸದ್ಯಕ್ಕೆ ತಲೆಮರೆಸಿಕೊಂಡಿರುವ ಪಾಕ್ ಮಾಜಿ ಸರ್ವಾಧಿಕಾರಿಯನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸುವ ಸಾಧ್ಯತೆ ಇದೆ.