ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಾವೂದ್‌ನ ಸಹಚರನನ್ನು ಭಾರತದ ವಶಕ್ಕೊಪ್ಪಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

ಭೂಗತ ದೊರೆ ದಾವೂದ್ ಇಬ್ರಾಹಿಂ ನಿಕಟವರ್ತಿ ಟೈಗರ್ ಹನೀಫ್‌ನನ್ನು ಭಾರತದ ವಶಕ್ಕೊಪ್ಪಿಸಬೇಕೆಂದು ಲಂಡನ್‌ನಲ್ಲಿ ಸಲ್ಲಿಸಿದ ...

Rashmi Kasaragodu
Updated On : 19 Apr 2013, 4:56 am

ಲಂಡನ್: ಭೂಗತ ದೊರೆ ದಾವೂದ್ ಇಬ್ರಾಹಿಂ ನಿಕಟವರ್ತಿ ಟೈಗರ್ ಹನೀಫ್‌ನನ್ನು ಭಾರತದ ವಶಕ್ಕೊಪ್ಪಿಸಬೇಕೆಂದು ಲಂಡನ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಬ್ರಿಟನ್‌ನ ಹೈಕೋರ್ಟ್ ತಿರಸ್ಕರಿಸಿದೆ.

ಗುಜರಾತ್‌ನಲ್ಲಿ 1993ರಲ್ಲಿ ನಡೆದ ಎರಡು ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೈವಾಡ ಹೊಂದಿರುವ  ಟೈಗರ್ ಹನೀಫ್‌ನನ್ನು ಭಾರತದ ವಶಕ್ಕೊಪ್ಪಿಸಿ ಎಂದು ಭಾರತ ಮನವಿ ಸಲ್ಲಿಸಿತ್ತು.

ದಾವೂದ್‌ನ ಸಹಚರ ಎಂದು ಶಂಕಿಸಲ್ಪಡುವ 51ರ ಹರೆಯದ ಹನೀಫ್  ಅಲಿಯಾಸ್ ಮೊಹಮ್ಮದ್ ಹನೀಫ್ ಉಮೆರ್‌ಜಿ ಪಟೇಲ್‌ನನ್ನು ಮಾರ್ಚ್ 2010ರಂದು ಗ್ರೇಟರ್ ಮಾಂಚೆಸ್ಟರ್‌ನ ಬಾಲ್ಟನ್‌ನಲ್ಲಿರುವ ಕಿರಾಣಿ ಅಂಗಡಿಯೊಂದರಿಂದ ಸೆರೆ ಹಿಡಿಯಲಾಗಿತ್ತು.

ಫೆಬ್ರವರಿ 2010 ರಂದು ಮೆಟ್ರೋಪೊಲಿಟನ್ ಪೊಲೀಸರು ಹನೀಫ್‌ನ್ನು ಭಾರತದ ವಶಕ್ಕೊಪ್ಪಿಸಲಿರುವ ವಾರೆಂಟ್ ಹೊರಡಿಸಿದ್ದರು.

1993ರಲ್ಲಿ ಸೂರತ್‌ನ ಮಾರುಕಟ್ಟೆಯಲ್ಲಿ ಗ್ರೇನೇಡ್ ಬಳಸಿ ಬಾಂಬ್ ಸ್ಫೋಟ ನಡೆಸಿದ ಪ್ರಕರಣದ ಶಂಕಿತ ಆರೋಪಿಯಾಗಿರುವ ಹನೀಫ್‌ನ ಬಂಧನಕ್ಕಾಗಿ ಭಾರತ ಆಗ್ರಹಿಸಿತ್ತು. ಈ ಬಾಂಬ್ ಸ್ಫೋಟದಲ್ಲಿ 8ರ ಹರೆಯದ ಶಾಲಾ ಬಾಲಕಿ ಸಾವನ್ನಪ್ಪಿದ್ದಳು.

ಅದೇ ವೇಳೆ ರೇಲ್ವೇ ನಿಲ್ದಾಣದಲ್ಲಿ ನಡೆಸಿದ ಇನ್ನೊಂದು ಗ್ರೇನೇಡ್ ಸ್ಫೋಟದಲ್ಲಿ ಆರೋಪಿಯಾಗಿದ್ದಾನೆ ಹನೀಫ್. ಈ ಸ್ಫೋಟದಲ್ಲಿ 12 ಮಂದಿಗೆ ತೀವ್ರ ಗಾಯಗಳಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement