ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ: 5ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ

ಇಲ್ಲಿನ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳನ್ನು ನೆರೆಮನೆಯಾತ ಎರಡು ದಿನಗಳ ಕಾಲ ನಿರಂತರವಾಗಿ ಲೈಂಗಿಕ ...

Rashmi Kasaragodu
Updated On : 19 Apr 2013, 3:45 am

ನವದೆಹಲಿ: ಇಲ್ಲಿನ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳನ್ನು ನೆರೆಮನೆಯಾತ ಎರಡು ದಿನಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಪಡಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಈ ಬಾಲಕಿ ಏಪ್ರಿಲ್ 15ರಂದು ಅಪಹರಣಕ್ಕೊಳಗಾಗಿದ್ದಳು. ಈಕೆಯನ್ನು ಅಪಹರಿಸಿದ ನೆರೆಮನೆಯಾತ ಎರಡು ದಿನಗಳ ಕಾಲ ಆಕೆಯನ್ನು ಅತ್ಯಾಚಾರಕ್ಕೊಳಪಡಿಸಿದ್ದಾನೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 30ರ ಹರೆಯದ ವ್ಯಕ್ತಿ ಬಾಲಕಿಯ ಮನೆಯಿರುವ ಕಟ್ಟಡದ ಗ್ರೌಂಡ್ ಫ್ಲೋರ್‌ನಲ್ಲೇ ವಾಸವಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ. ಆದಾಗ್ಯೂ, ಈತನ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಬುಧವಾರ ರಾತ್ರಿ ಪಕ್ಕದ ಮನೆಯಿಂದ ಬಾಲಕಿಯ ಅಳು ಕೇಳಿಸಿದ್ದು, ಬಾಲಕಿಯ ಹೆತ್ತವರು ಆಕೆಯನ್ನು ದುಷ್ಕರ್ಮಿಯ ಕೈಯಿಂದ ರಕ್ಷಿಸಿದ್ದಾರೆ.

ಕೆಲವೊಂದು ಮೂಲಗಳ ಪ್ರಕಾರ ಅತ್ಯಾಚಾರಕ್ಕೊಳಾದ ಬಾಲಕಿಯ ಕತ್ತು ಸೀಳಿದ್ದು, ಆಕೆಯ ಗುಪ್ತಾಂಗಗಳನ್ನೂ ಗಾಯಗೊಳಿಸಲಾಗಿದೆ.

ತೀವ್ರ ಅಸ್ವಸ್ಥಳಾಗಿರುವ ಬಾಲಕಿಯನ್ನು ಶಹ್‌ದಾರಾದಲ್ಲಿರುವ ಸ್ವಾಮಿ ದಯಾನಂದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಈ ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು, ತಲೆಮರೆಸಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement