ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ ಪ್ರಣಾಳಿಕೆ 'ವಿಕಾಸ' ಬಿಡುಗಡೆ

ಆಡಳಿತರೂಡ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಮತದಾರನ ಮನ ಗೆಲ್ಲಲು ಶುಕ್ರವಾರ 'ವಿಕಾಸ' ಹೆಸರಿನ ಚುನಾವಣಾ ಪ್ರಣಾಳಿಯನ್ನು ಬಿಡೆಗಡೆ ಮಾಡಿದೆ.

Lingaraj Badiger
Updated On : 19 Apr 2013, 6:12 am

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲು ಹರ ಸಾಹಸ ಪಡುತ್ತಿರುವ ಆಡಳಿತರೂಡ ಬಿಜೆಪಿ, ಮತದಾರನ ಮನ ಗೆಲ್ಲಲು ಶುಕ್ರವಾರ 'ವಿಕಾಸ' ಹೆಸರಿನ ಚುನಾವಣಾ ಪ್ರಣಾಳಿಯನ್ನು ಬಿಡೆಗಡೆ ಮಾಡಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾಜ್ ಜೋಶಿ, ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಉಪಸ್ಥಿತರಿದ್ದರು.

ಮಹಿಳೆಯರಿಗೆ ಶೇ.50ರಷ್ಟು, ಮೀಸಲು, ಬಡ ಕುಟುಂಬಗಳಿಗೆ ಕೆ.ಜಿಗೆ 1ರು. ದರದಲ್ಲಿ ಅಕ್ಕಿ ಸೇರಿದಂತೆ ಹಲವು ಭರವಸೆಗಳ ಮಹಾಪೂರವೇ ಹರಿಸಿದೆ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

ದಿನದ 24 ಗಂಟೆ ವಿದ್ಯುತ್ ಪೂರೈಕೆ
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವ ವಿಮೆ
ಹಣ್ಹು-ತರಕಾರಿ ಮಾರ್ಕೆಟ್ ಸಹಕಾರಿ ಸಂಸ್ಥೆ ಸ್ಥಾಪನೆ
ಬಡ ಮೀನುಗಾರರಿಗೆ ಮನೆಗಳ ನಿರ್ಮಾಣ
ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳ ನಿಯಂತ್ರಣ
ಬಡತನ ರೇಖೆ ಕೆಳಗಿರುವವರಿಗೆ ಯಶಸ್ವಿನಿ ಕಾರ್ಡ್
ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ
ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ಇಂಟರ್ನೆಟ್
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ದರ್ಜೆಗೆ
5 ಸಾವಿರ ಜನರಿರುವ ಗ್ರಾಮಕ್ಕೆ ಒಂದು ಕಾಲೇಜ್ ಸ್ಥಾಪನೆ
5 ವರ್ಷಗಳಲ್ಲಿ ಕನಿಷ್ಟ 50 ಸಾವಿರ ಚೆಕ್‌ಡ್ಯಾಮ್ ನಿರ್ಮಾಣ
ಬೆಂಗಳೂರಿನಲ್ಲಿ ಪರಿಸರ ಮಂಡಳಿ ರಚನೆ
5 ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ
ಮಹಿಳಾ ಹಕ್ಕುಗಳ ಆಯೋಗ ರಚನೆ
ಮಳೆ ನೀರು ಸಂಗ್ರಹ ಮಾಡಿದವರಿಗೆ ಕಂದಾಯ ವಿನಾಯಿತಿ
ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ
ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement