ಸಿಯಾಚಿನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ; 72 ಸಾವು
ಚೀನಾದ ನೈಋತ್ಯ ಭಾಗದಲ್ಲಿರುವ ಸಿಯಾಚಿನ್ ಪ್ರಾಂತ್ಯದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 72 ಮಂದಿ ಸಾವನ್ನಪ್ಪಿದ್ದಾರೆ...
ಬೀಚಿಂಗ್: ಚೀನಾದ ನೈಋತ್ಯ ಭಾಗದಲ್ಲಿರುವ ಸಿಯಾಚಿನ್ ಪ್ರಾಂತ್ಯದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 72 ಮಂದಿ ಸಾವನ್ನಪ್ಪಿದ್ದಾರೆ. ಅದೇ ವೇಳೆ 600ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಭೂಕಂಪನದ ತೀವ್ರತೆ 7.0 ಆಗ್ಗಿದ್ದು, ಸ್ಥಳೀಯ ಕಾಲಾಮಾನ ಬೆಳಗ್ಗೆ 8.02 ಗಂಟೆಗೆ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಭೂಕಂಪನದ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆ ಹಿಡಿದಿದ್ದು, ಭೂಕಂಪದ ವೇಳೆ ಬಹು ಮಹಡಿ ಕಟ್ಟಡಗಳು ಕಂಪಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 20 ಸೆಕೆಂಡುಗಳ ವರೆಗೆ ಕಟ್ಟಡಗಳು ಕಂಪಿಸಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಲಿಶಾನ್ ನಗರ, ಚೋಂಗ್ವಿಂಗ್ ಮುನಿಸಿಪಾಲಿಟಿ ,ಗೈಜೌ, ಗಾನ್ಸು, ಶಾಂಕ್ಸಿ ಮತ್ತು ಯುನನ್ ಪ್ರದೇಶಗಳಲ್ಲೂ ಭೂಕಂಪ ಅನುಭವಕ್ಕೆ ಬಂದಿದೆ. ಭೂಕಂಪದ ಕಾರಣ ಚೆಂಗ್ಡು ವಿಮಾನ ನಿಲ್ದಾಣಕ್ಕೆ ಹಾನಿ ಸಂಭವಿಸಿದ್ದು, ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.