ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್

1993ರ ಮುಂಬೈ ಸರಣಿ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷ ಜೈಲು ಶಿಕ್ಷೆಗೆ..

Lingaraj Badiger
Updated On : 22 Apr 2013, 2:30 am

ಮುಂಬೈ: 1993ರ ಮುಂಬೈ ಸರಣಿ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ.

ಬಾಲಿವುಡ್ ನಿರ್ದೇಶಕ ಶಕೀಲ್ ನೂರಾನಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮುಂಬೈನ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ಕೋರ್ಟ್ ಹಲವು ಬಾರಿ ದತ್‌ಗೆ ನೋಟಿಸ್ ನೀಡಿತ್ತು. ಆದರೆ ಪದೇಪದೆ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ದತ್ ವಿರುದ್ಧ ಇಂದು ಜಾಮೀನು ರಹಿತ ವಾರಂಟ್ ಜಾರಿ ಮಾಡಿಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಪೊಲೀಸರ್ ಸಂಜಯ್ ದತ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.

2002ರಲ್ಲಿ 'ಜಾನ್ ಕೀ ಬಾಜಿ' ಚಿತ್ರ ನಿರ್ಮಿಸುತ್ತಿದ್ದ ನೂರಾನಿಯಿಂದ ಅಭಿನಯಕ್ಕಾಗಿ ಸಂಜಯ್ ದತ್ 50 ಲಕ್ಷ ರುಪಾಯಿ ಮುಂಗಡವಾಗಿ ಪಡೆದಿದ್ದರು. ಆದರೆ ಚಿತ್ರೀಕರಣದ ಅರ್ಧದಲ್ಲೇ ಚಿತ್ರದಲ್ಲಿ ನಟಿಸಲ್ಲ ಎಂದು ಸಂಜಯ್ ದತ್ ಹೇಳಿದ್ದರು. ಅಲ್ಲದೆ ಹಣ ವಾಪಸ್ ಕೊಡಲು ದತ್ ನಿರಾಕರಿಸಿದ್ದರು. ಈ ಸಂಬಂಧ ನೂರಾನಿ ಮತ್ತು ದತ್ ನಡುವೆ ವಿವಾದ ಹುಟ್ಟಿತ್ತು.

ಹಣದ ವಿಚಾರವಾಗಿ ಸಂಜಯ್ ದತ್ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನೂರಾನಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement