ಮತ್ತೆ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ
ಇತ್ತೀಚಿಗಷ್ಟೇ ಪ್ರತಿ ಲಿಟರ್ಗೆ 1 ರುಪಾಯಿ ಕಡಿಯಾಗಿದ್ದ ಪೆಟ್ರೋಲ್ ಬೆಲೆ ಇದೀಗ ಮತ್ತೆ 2.50ರುಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ..
ನವದೆಹಲಿ: ಇತ್ತೀಚಿಗಷ್ಟೇ ಪ್ರತಿ ಲಿಟರ್ಗೆ 1 ರುಪಾಯಿ ಕಡಿಯಾಗಿದ್ದ ಪೆಟ್ರೋಲ್ ಬೆಲೆ ಇದೀಗ ಮತ್ತೆ 2.50ರುಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಪೆಟ್ರೋಲ್ ಬೆಲೆ ಮತ್ತೆ ಇಳಿಯಾಗುವ ಸಾಧ್ಯತೆ ಇದೆ.
ಕಳೆದ ಏಪ್ರಿಲ್ 15ರಂದು ಪ್ರತಿ ಲಿಟರ್ ಪೆಟ್ರೋಲ್ಗೆ 1 ರುಪಾಯಿ ಇಳಿಕೆಯಾಗಿತ್ತು. ಒಂದೇ ತಿಂಗಳಲ್ಲಿ ಪೆಟ್ರೋಲ್ ಬೆಲೆ ಮೂರನೇ ಬಾರಿ ಇಳಿಕೆಯಾಗುತ್ತಿದೆ.