ವಿವಿಐಪಿ ಕಾಪ್ಟರ್ ಹಗರಣ: ಆರೋಪಿಗಳ ಬ್ಯಾಂಕ್ ಖಾತೆ ಜಪ್ತಿ
ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಮಾಜಿ ಸೇನಾ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳ ಬ್ಯಾಂಕ್ ..
ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಮಾಜಿ ಸೇನಾ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಯನ್ನು ಸಿಬಿಐ ಮಂಗಳವಾರ ಜಪ್ತಿ ಮಾಡಿದೆ.
ಎಫ್‌ಐಆರ್‌ನಲ್ಲಿರುವ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ವಿವಿಐಪಿ ಕಾಪ್ಟರ್ ಖರೀದಿಯಲ್ಲಿ 3,600 ಕೋಟಿ ರುಪಾಯಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಎದುರಿಸುತ್ತಿರುವ ತ್ಯಾಗಿ ಹಾಗೂ ಅವರ ಸಹೋದರ ಸಂಜೀವ್ ಅಲಿಯಾಸ್ ಜುಲೀ, ರಾಜೀವ್ ಮತ್ತು ಸಂದೀಪ್ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇತರೆ ಆರೋಪಿಗಳಾದ ಮಾಜಿ ಕೇಂದ್ರ ಸಚಿವ ಸಂತೋಷ್ ಬಗ್ರೋಡಿಯಾ ಅವರ ಸಹೋದರ ಹಾಗೂ ಐಡಿಎಸ್ ಇನ್ಫೊಟೆಕ್ ಅಧ್ಯಕ್ಷ ಸತೀಶ್ ಬಗ್ರೋಡಿಯಾ, ಐಡಿಎಸ್ ಇನ್ಫೊಟೆಕ್‌ನ ಎಂಡಿ ಪ್ರತಾಪ್ ಅಗರವಾಲ್, ಏರೋಮ್ಯಾಟ್ರಿಕ್ಸ್ ಸಿಇಒ ಪ್ರವೀನ್ ಬಕ್ಸಿ ಮತ್ತು ಕಾನೂನು ಸಲಹೆಗಾರ ಗೌತಮ್ ಖೈತಾನ್ ಅವರ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.