ಅಗ್ನಿ ಅವಘಡ: ಇಬ್ಬರು ಸಹೋದರಿಯರು ಸಜೀವ ದಹನ
ಬಾಗಲಕೋಟೆ ಜಿಲ್ಲೆಯ ಮುಧೋಳದ ಆನಂದನಗರದಲ್ಲಿನ ಮನೆಯೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ..
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳದ ಆನಂದನಗರದಲ್ಲಿನ ಮನೆಯೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಸಹೋದರಿಯರು ಸಜೀವ ದಹನವಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದ್ದು, ಘಟನೆಯಲ್ಲಿ ಒಂದೇ ಕುಟುಂಬದ ಹುಡುಗರನ್ನು ಮದುವೆಯಾಗಿದ್ದ 23 ವರ್ಷದ ವಿಜಯಲಕ್ಷ್ಮೀ ಹಾಗೂ 25 ವರ್ಷದ ಸವಿತಾ ಎಂಬ ಸಹೋದರಿಯರು ದುರ್ಮರಣಕ್ಕಿಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸಂತೋಷ್ ಬಳಿಗಾರ್ ಹಾಗೂ ಮುತ್ತುರಾಜ್ ಬಳಿಗಾರ್ ಜೋತೆ ಈ ಇಬ್ಬರು ಸಹೋದರಿಯರ ವಿವಾಹವಾಗಿತ್ತು.