ಬಾಂಗ್ಲಾದಲ್ಲಿ ಕಟ್ಟಡ ಕುಸಿತ: 82 ಸಾವು
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ 8 ಮಹಡಿಗಳ ಕಟ್ಟಡವೊಂದು ಬುಧವಾರ ಕುಸಿದು ಬಿದ್ದ ಪರಿಣಾಮ..
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ 8 ಮಹಡಿಗಳ ಕಟ್ಟಡವೊಂದು ಬುಧವಾರ ಕುಸಿದು ಬಿದ್ದ ಪರಿಣಾಮ ಸುಮಾರು 82ಕ್ಕು ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಅವಶೇಷಗಳಿಂದ ಈವರೆಗೆ ಕನಿಷ್ಟ 82 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೇಲಿನ ಸಂಸತ್ ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ರಫಿಲ್ ಅಲಂ ಅವರು ಹೇಳಿದ್ದಾರೆ.
ಬ್ಯಾಂಕ್ ಶಾಖೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಹಾಗೂ ಹಲವು ಅಂಗಡಿಗಳನ್ನು ಹೊಂದಿದ್ದ 8 ಮಹಡಿಯ ಕಟ್ಟಡ ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ ಅಗ್ನಿ ಶಾಮಕ ದಳದ ಅಧಿಕಾರಿ ನಿಲುಫರ್ ಯಾಸ್ಮಿನ್ ಅವರು ತಿಳಿಸಿದ್ದಾರೆ.
ಕಟ್ಟಡದ ಅವಶೇಷಗಳಡಿ ಇನ್ನು ಹಲವು ಜನ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಸೇನಾ ಸಿಬ್ಬಂದಿ ನೆರವು ಪಡೆಯಲಾಗಿದೆ.