ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2ಜಿ ಹಗರಣ: ಜೆಪಿಸಿ ಸಭೆ ರದ್ದು

2 ಸ್ಪೆಕ್ಟ್ರಂ ಹಗರಣ ಸಂಬಂಧ ಸಿದ್ಧಪಡಿಸಲಾಗಿರುವ ಕರಡು ಪ್ರತಿಯನ್ನು ಅಂಗೀಕರಿಸುವ ಬಗ್ಗೆ ಚರ್ಚಿಸಲು ಇಂದು ನಡೆಯಬೇಕಿದ್ದ ಜಂಟಿ ..

Lingaraj Badiger
Updated On : 25 Apr 2013, 4:06 am

ನವದೆಹಲಿ: 2ಜಿ  ಸ್ಪೆಕ್ಟ್ರಂ ಹಗರಣ ಸಂಬಂಧ ಸಿದ್ಧಪಡಿಸಲಾಗಿರುವ ಕರಡು ಪ್ರತಿಯನ್ನು ಅಂಗೀಕರಿಸುವ ಬಗ್ಗೆ ಚರ್ಚಿಸಲು ಇಂದು ನಡೆಯಬೇಕಿದ್ದ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಭೆಯನ್ನು ರದ್ದು ಮಾಡಲಾಗಿದೆ.

ಜೆಪಿಸಿಯ ಕರಡು ವಿರೋಧಿಸುವ ಬಗ್ಗೆ ಡಿಎಂಕೆ, ಬಿಜೆಡಿ ಹಾಗೂ ಎಡ ಪಕ್ಷಗಳೊಂದಿಗೆ ಬಿಜೆಪಿಯ ಯಶವಂತ್ ಸಿನ್ಹಾ ಅವರು ಮಾತುಕತೆ ನಡೆಸಿದ್ದರು. ಅಲ್ಲದೆ ಜೆಪಿಸಿ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿದ್ದವು. ಪ್ರತಿಪಕ್ಷಗಳಿಗೆ ಬೆದರಿದ ಸರ್ಕಾರ ಜೆಪಿಸಿ ಸಭೆ ರದ್ದುಗೊಳಿಸಿದೆ ಎನ್ನಲಾಗುತ್ತಿದೆ.

ಈ ಮಧ್ಯೆ, ಮುಂದಿನ ವಾರ ಜೆಪಿಸಿ ಸಭೆ ನಡೆಯಲಿದೆ ಎಂದು ಜೆಪಿಸಿ ಅಧ್ಯಕ್ಷ ಪಿ.ಸಿ ಚಾಕೋ ಅವರು ಹೇಳಿದ್ದಾರೆ.

ಇನ್ನು ಕಾಂಗ್ರೆಸೇತರ 30 ಸದಸ್ಯರನ್ನು ಹೊಂದಿರುವ ಜಂಟಿ ಸಂಸದೀಯ ಸಮಿತಿ ವಿವಾದಿತ ಕರಡು ಪ್ರತಿಯನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement