ಕೊಯಮತ್ತೂರು: ಅಗ್ನಿ ಆಕಸ್ಮಿಕದಲ್ಲಿ ನಾಲ್ವರ ಸಜೀವ ದಹನ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಕೊಯಂಬತ್ತೂರು: ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ.
ನಗರದ ಅವಿನಾಶಿ ರಸ್ತೆಯಲ್ಲಿರುವ ವಿಘ್ನೇಶ್ವರ ಕ್ರಾಸ್ತಾ ಕಾಂಪ್ಲೆಕ್ಸ್ ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ದುರಂತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಕಟ್ಟದಲ್ಲಿ ದಟ್ಟ ಹೊಗೆಆವರಿಸಿದ್ದರಿಂದ, ಜೀವ ಉಳಿಸಿಕೊಳ್ಳಲುಇಬ್ಬರು ಯುವತಿಯವರುಕಟ್ಟಡದ ಮೇಲಿಂದಕೆಳಗೆ ಜಿಗಿದ್ದಿದ್ದು,ಯುವತಿಯರ ಸ್ಥಿತಿ ಗಂಭೀರವಾಗಿದೆ. ಕಟ್ಟಡದಿಂದ ಜಿಗಿದಯುವತಿಯರನ್ನು ಜೀವಿತಾ ಹಾಗೂ ಸುಕನ್ಯ ಎಂದುಗುರುತಿಸಲಾಗಿದ್ದು, ಇಬ್ಬರನ್ನು ಆಸ್ಪತ್ರೆಗೆದಾಖಲಿಸಲಾಗಿದೆ.