ತಾಜ್ ಮಹಲ್ ಬಳಿ ಸ್ಫೋಟ: 3 ಸಾವು
ದೆಹಲಿ ಸಮೀಪದ ಆಗ್ರಾದಲ್ಲಿರುವ ಪ್ರೀತಿಯ ಸೌಧ ತಾಜ್ ಮಹಲ್ ಬಳಿ ಗುರುವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು...
ಆಗ್ರಾ: ದೆಹಲಿ ಸಮೀಪದ ಆಗ್ರಾದಲ್ಲಿರುವ ಪ್ರೀತಿಯ ಸೌಧ ತಾಜ್ ಮಹಲ್ ಬಳಿ ಗುರುವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿದ್ದಾರೆ.
ತಾಜ್ ಗಂಜ್ ಪ್ರದೇಶದಲ್ಲಿರುವ ಗುಜರಿ ಗೋದಾಮಿನಲ್ಲಿ ಸೇನಾ ಪಡೆಯ ಅವಧಿ ಮುಗಿದ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ, ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತಾಜ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.