ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

13ರ ಹರೆಯದ ಬಾಲಕಿ ಮೇಲೆ ಗ್ಯಾಂಗ್ ರೇಪ್

ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದು 4 ತಿಂಗಳಲ್ಲೇ 5ರ ಹರೆಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಸುದ್ದಿಯ ಬೆನ್ನಲ್ಲೇ ಇದೀಗ...

Rashmi Kasaragodu
Updated On : 26 Apr 2013, 2:23 am

ಮುಂಬೈ: ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದು 4 ತಿಂಗಳಲ್ಲೇ 5ರ ಹರೆಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಸುದ್ದಿಯ ಬೆನ್ನಲ್ಲೇ ಇದೀಗ ಮುಂಬೈಯಲ್ಲಿ 13ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ.

ಮುಂಬೈಯ ವಕೋಲಾ ಎಂಬಲ್ಲಿ 13ರ ಹರೆಯದ ಬಾಲಕಿ ಮೇಲೆ ನಾಲ್ವರು ಯುವಕರು ಗುರುವಾರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಆದಾಗ್ಯೂ, ಈ ಅತ್ಯಾಚಾರಕ್ಕೆ ಬಾಲಕಿಯ ಗೆಳತಿಯೂ ಸಾಥ್ ನೀಡಿದ್ದಳು ಎಂಬ ವಿಷಯ ಬೆಚ್ಚಿ ಬೀಳಿಸುವಂತಿದೆ.

ನಡೆದದ್ದೇನು? : 13ರ ಹರೆಯದ ಬಾಲಕಿಯನ್ನು ಆಕೆಯ ಗೆಳತಿ ಮನೆಗೆ ಆಮಂತ್ರಿಸಿ ಅಮಲು ಪದಾರ್ಥ ಬೆರೆಸಿದ ಪಾನೀಯವನ್ನು ನೀಡಿದ್ದಳು. ಇದನ್ನು ಕುಡಿದ ಬಾಲಕಿ ಪ್ರಜ್ಞೆ ತಪ್ಪಿದ್ದು, ಆ ವೇಳೆ ಮನೆಯಲ್ಲಿ ಹಾಜರಿದ್ದ ನಾಲ್ವರು ಯುವಕರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.

ಇದೀಗ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆದೆ ದಾಖಲಿಸಿದ್ದು, ಅತ್ಯಾಚಾರಿಗಳ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement