ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂದಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ನಿಧನ

ಬಿಜಾಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ಜಿ. ಪಾಟೀಲ್..

Lingaraj Badiger
Updated On : 27 Apr 2013, 5:05 am

ಬಿಜಾಪುರ: ಬಿಜಾಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ಜಿ. ಪಾಟೀಲ್ ಅವರು ಶನಿವಾರ ಹೃದಾಯಾಘಾತದಿಂದ ನಿಧನರಾದರು.

ಚುನಾವಣಾ ಪ್ರಚಾರದ ವೇಳೆ ಹೃದಯಾಘಾತಕ್ಕೆ ಒಳಗಾದ ದ್ಯಾವಪ್ಪ ಅವರನ್ನು ಕೂಡಲೆ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸಜ್ಜನ ರಾಜಕಾರಣಿಯಾಗಿದ್ದ ದ್ಯಾವಪ್ಪ ಅವರ ಪರ ಪ್ರಚಾರ ಮಾಡಲು ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ನಾಳೆ ಸಿಂದಗಿಗೆ ಆಗಮಿಸುವ ಕಾರ್ಯಕ್ರಮವಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೆಡಿಯು ಅಭ್ಯರ್ಥಿ ನಿಧನದಿಂದಾಗಿ ಮೇ 5ರಂದು ನಡೆಯಲಿದ್ದ ಸಿಂದಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement