ಏಕ್ತಾ ಕಪೂರ್ ಮನೆ ಮೇಲೆ ಐಟಿ ದಾಳಿ
ಬಾಲಾಜಿ ಟೆಲಿವಿಷನ್ ಸಂಸ್ಥೆಯ ಮುಖ್ಯಸ್ಥೆ ಏಕ್ತಾ ಕಪೂರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ...
ಮುಂಬೈ: ಬಾಲಾಜಿ ಟೆಲಿವಿಷನ್ ಸಂಸ್ಥೆಯ ಮುಖ್ಯಸ್ಥೆ ಏಕ್ತಾ ಕಪೂರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭಾರತದ ಅತಿ ದೊಡ್ಡ ಟೆಲಿವಿಷನ್ ಸಂಸ್ಥೆಯಾಗಿರುವ ಬಾಲಾಜಿ ಟೆಲಿವಿಷನ್ನ ನಿರ್ದೇಶಕಿ ಏಕ್ತಾ ಕಪೂರ್ ಹಾಗೂ ಸಂಸ್ಥೆಯ ನಿರ್ಮಾತ್ರು ಜಿತೇಂದ್ರ ಮತ್ತು ಅವರ ಸಹೋದರ ತುಷಾರ ಕಪೂರ್ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ.
ತೆರಿಗೆ ವಂಚಿಸಿದ ಆರೋಪ ಮೇಲೆ ಇಂದು ಮುಂಜಾನೆ 9.30ರ ಸಮಯದಲ್ಲಿ ಸುಮಾರು 100 ಸದಸ್ಯರ ತಂಡವನ್ನೊಳಗೊಂಡ ಆದಾಯ ತೆರಿಗೆ ಅಧಿಕಾರಿಗಳ ತಂಡ ಎಂಟು ಕಡೆ ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬಾಲಾಜಿ ಮೋಷನ್ ಪಿಕ್ಚರ್ ಸಂಸ್ಥೆಯು ಏಪ್ರಿಲ್ 19ರಂದು 'ಏಕ್ ತೀ ದಯಾನ್' ಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಚಿತ್ರ ಬಾಲಿವುಡ್ನ ಬಾಕ್ಸ್ ಆಪೀಸ್ನಲ್ಲಿ ಹಿಟ್ ಆಗಿತ್ತು.