ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚುನಾವಣೆ ಎಫೆಕ್ಟ್, 'ಎಲೆಕ್ಷನ್‌' ಸದ್ಯಕ್ಕಿಲ್ಲ!

ರಾಮು ನಿರ್ಮಾಣದ ಹಾಗೂ ಮಾಲಾಶ್ರೀ ಅಭಿನಯದ 'ಎಲೆಕ್ಷನ್‌' ಚಿತ್ರಕ್ಕೂ ಚುನಾವಣೆಯ ಬಿಸಿ ತಟ್ಟಿದೆ.

Lingaraj Badiger
Updated On : 30 Apr 2013, 5:00 am

ಬೆಂಗಳೂರು: ರಾಮು ನಿರ್ಮಾಣದ ಹಾಗೂ ಮಾಲಾಶ್ರೀ ಅಭಿನಯದ 'ಎಲೆಕ್ಷನ್‌' ಚಿತ್ರಕ್ಕೂ ಚುನಾವಣೆಯ ಬಿಸಿ ತಟ್ಟಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 'ಎಲೆಕ್ಷನ್‌' ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ಮಂಗಳವಾರ ನಿರಾಕರಿಸಿದೆ.

ಚುನಾವಣೆ ಸಂದರ್ಭದಲ್ಲಿ 'ಎಲೆಕ್ಷನ್‌' ತೆರೆಕಂಡರೆ ಆ ಚಿತ್ರ ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಿತ್ರದಲ್ಲಿ ರಾಜಕೀಯ ಪಕ್ಷಗಳನ್ನು ಹೋಲುವ ಸನ್ನಿವೇಶಗಳು ಇರುವ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಅನುಮತಿ ನೀಡಲು ನಿರಾಕರಿಸಿ, ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ರವಾನಿಸಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಮಾಲಾಶ್ರೀ ಅವರು ಮುಖ್ಯ ಚುನಾವಣಾ ಆಯುಕ್ತರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ರಾಮು ಅವರು, ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಒಳ್ಳೆಯ ಚಿತ್ರ ಮಾಡಿದ್ದೇವು. ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಿದ್ದರೆ, ಕೋಟಿ ಕೋಟಿ ಹಣ ಲೂಟಿ ಮಾಡುವುದೇ ರಾಜಕೀಯ ಎನ್ನುವವರಿಗೆ ಒಂದು ಒಳ್ಳೆಯ ಸಂದೇಶ ಇತ್ತು. ಆದರೆ ಚುನಾವಣೆ ಮುಗಿಯುವವರೆಗೆ ಅನುಮತಿ ನೀಡುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಹೇಳಿರುವುದರಿಂದ ತಮ್ಮ ಉದ್ದೇಶ ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement