ಪೆಟ್ರೋಲ್ ದರದಲ್ಲಿ 3 ರೂ. ಇಳಿಕೆ
ನವದೆಹಲಿ: ಪೆಟ್ರೋಲ್ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಪ್ರತಿ ಲೀಟರ್ಗೆ 3 ರೂ. ಇಳಿಕೆಯಾಗಿದೆ. ನೂತನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಯುತ್ತಿರುವುದೇ ಪೆಟ್ರೋಲ್ ದರ ಕಡಿತಕ್ಕೆ ಕಾರಣವಾಗಿದೆ. ಏ. 15ರಂದು ಪೆಟ್ರೋಲ್ ದರ 1 ರೂ. ಕಡಿಮೆಯಾಗಿತ್ತು. ಇದೀಗ 3 ರೂ. ಇಳಿಕೆಯಾಗಿರುವುದು ವಾಹನ ಸವಾರರಿಗೆ ಸಂತೋಷದ ಸುದ್ದಿಯಾಗಿದೆ.