ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭ್ರಷ್ಟಾಚಾರದಲ್ಲಿ ಯುಪಿಎ ಸ್ವತಃ ತನ್ನ ದಾಖಲೆಯನ್ನೇ ಮುರಿದಿದೆ: ಸುಷ್ಮಾ

ಕಲ್ಲಿದ್ದಲು ಹಗರಣ ಮಂಗಳವಾರ ಲೋಕಸಭೆಯ ಕೋಲಹಾಲ ಸೃಷ್ಟಿಸಿದ್ದು, ಸಿಬಿಐ ತನಿಖೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪದ ಬಗ್ಗೆ..

Lingaraj Badiger
Updated On : 30 Apr 2013, 1:44 am

ನವದೆಹಲಿ: ಕಲ್ಲಿದ್ದಲು ಹಗರಣ ಮಂಗಳವಾರ ಲೋಕಸಭೆಯ ಕೋಲಹಾಲ ಸೃಷ್ಟಿಸಿದ್ದು, ಸಿಬಿಐ ತನಿಖೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ ಕಾರಿದ ನಂತರ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ಇದು ಸ್ವಾತಂತ್ರ್ಯ ನಂತರ ಬಂದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ, ಒಂದು ನಿಮಿಷವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಸರ್ಕಾರಕ್ಕೆ ಇಲ್ಲ ಎಂದ ಸುಷ್ಮಾ, ಪ್ರಧಾನಿ ಹಾಗೂ ಕಾನೂನು ಸಚಿವರನ್ನು ಕಲ್ಲಿದ್ದಲು ಹಗರಣದಿಂದ ಬಚಾವ್ ಮಾಡಲು ಸರ್ಕಾರ ಹಲವು ತಂತ್ರಗಳನ್ನು ಉಪಯೋಗಿಸುತ್ತಿದೆ ಎಂದರು.

ಭಾರತದ ಇತಿಹಾಸದಲ್ಲೇ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಹಗರಣದ ಮೇಲೆ ಹಗರಣ ಮಾಡುವ ಮೂಲಕ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಸ್ವತಃ ತನ್ನ ದಾಖಲೆಗಳನ್ನು ತಾನೇ ಮುರಿದಿದೆ ಎಂದು ಪ್ರತಿಪಕ್ಷದ ನಾಯಕಿ ಹೇಳಿದರು.

ನಾವು ಹಣಕಾಸು ಮಸೂದೆ ಮತ್ತು ಇತರ ಮೂರು ಮಸೂದೆಗಳಿಗೆ ಅವಕಾಶ ನೀಡುತ್ತೇವೆ. ಆದರೆ ನಂತರ ಸಂಸತ್ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಸುಷ್ಮಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement