ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಖ್ ನರಮೇಧ: ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ

ಸಜ್ಜನ್ ಕುಮಾರ್ ದೋಷಮುಕ್ತ ಎಂದು ತೀರ್ಪು ನೀಡಿದ ಹಿನ್ನಲೆಯಲ್ಲಿ ಸಿಖ್ ಧರ್ಮೀಯರು ದೆಹಲಿಯ ಸುಭಾಷ್ ನಗರ ಮೆಟ್ರೋ...

Vishwanath S
Updated On : 1 May 2013, 6:07 am

ನವದೆಹಲಿ: ಸಜ್ಜನ್ ಕುಮಾರ್ ದೋಷಮುಕ್ತ ಎಂದು ತೀರ್ಪು ನೀಡಿದ ಹಿನ್ನಲೆಯಲ್ಲಿ ಸಿಖ್ ಧರ್ಮೀಯರು ದೆಹಲಿಯ ಸುಭಾಷ್ ನಗರ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

1984ರ ಸಿಖ್ ನರಮೇಧ ಪ್ರಕರಣದ  ವಿಚಾರಣೆ ನಡೆಸಿದ ದೆಹಲಿಯ ಕಾರ್ಕರ್ ಡುಮಾ ನ್ಯಾಯಾಲಯ, ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೋಷಮುಕ್ತ ಎಂದು ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ದೇಶಾದ್ಯಂತ ಸಿಖ್ಖರ ಪ್ರತಿಭಟನೆ ಆರಂಭವಾಗಿತ್ತು. ಇಂದು ಕೂಡ ಪ್ರತಿಭಟನೆ ಮುಂದುವರೆದಿದ್ದು, ದೆಹಲಿಯ ಸುಭಾಷ್ ನಗರ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನಾಕಾರರು 2 ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಲ್ಲದೆ ಸುಪ್ರೀಂಕೋರ್ಟ್ ಕೂಡಲೆ ಮಧ್ಯಸ್ಥಿಕೆ ವಹಿಸಿ ತೀರ್ಪುನ್ನು ಪರಿಷ್ಕರಿಸಬೇಕು. ಇದು ಕೇವಲ ಗುಜರಾತ್‌ನಲ್ಲಿ ಮಾತ್ರ ನಡೆದಂತಹ ಕೃತ್ಯ ಅಲ್ಲ. ರಾಷ್ಟ್ರವ್ಯಾಪ್ತಿ ನಡೆದ ಪ್ರಕರಣವಾಗಿದ್ದು, ದೇಶದ ಪ್ರತಿಯೊಬ್ಬರು ಸಹ ಪ್ರತಿಭಟಿಸಬೇಕು ಎಂದು ಸಿರೋಮನಿ ಅಕಾಲಿ ದಳ ಮುಖಂಡ ನರೇಶ್ ಗುಜರಾಲ್ ಹೇಳಿದ್ದಾರೆ.

1984ರಲ್ಲಿ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ ಸುಮಾರು 3000 ಸಿಖ್ಖರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸಹ ಆರೋಪಿಯಾಗಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಕಾರ್ಕರ್ ಡುಮಾ ಜಿಲ್ಲಾ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement