ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್
ಬೃಂದಾವನ ಚಿತ್ರದ ಚಿತ್ರೀಕರಣದ ವೇಳೆ ತಲೆಗೆ ಏಟು ಬಿದ್ದಿದ್ದರಿಂದ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ..
ಬೆಂಗಳೂರು: ಬೃಂದಾವನ ಚಿತ್ರದ ಚಿತ್ರೀಕರಣದ ವೇಳೆ ತಲೆಗೆ ಏಟು ಬಿದ್ದಿದ್ದರಿಂದ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು ಶನಿವಾರ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಶೂಟಿಂಗ್ ವೇಳೆ ಕೆಳಗೆ ಬಿದ್ದು ಪೆಟ್ಟಾಗಿತ್ತು. ಈಗ ಚಿಕಿತ್ಸೆ ಪಡೆದಿದ್ದೇನೆ, ವೈದ್ಯರು ಇನ್ನು ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಫೈಟಿಂಗ್ ದೃಶ್ಯ ಚಿತ್ರೀಕರಿಸುತ್ತಿದ್ದ ವೇಳೆ ದರ್ಶನ್ ಕುದುರೆಯಿಂದ ಬಿದ್ದ ಪರಿಣಾಮ ತಲೆ ಹಾಗೂ ಭುಜಕ್ಕೆ ಪೆಟ್ಟಾಗಿತ್ತು. ಆದರೆ ನಿನ್ನೆ ಬೆಳಗಿನ ಜಾವ ಅವರಿಗೆ ಹೆಚ್ಚು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು.