ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದುರ್ಗಾ ಅಮಾನತು: ನ್ಯಾ.ಯ ದೊರಕಿಸಿಕೊಡಲು ಪ್ರಧಾನಿಗೆ ಸೋನಿಯಾ ಪತ್ರ

Vishwanath S
Updated On : 3 Aug 2013, 6:44 am

ನವದೆಹಲಿ: ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರ ಅಮಾನತುಗೊಂಡ ವಾರದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಅಮಾನತು ಕುರಿತಂತೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ಮಹಮೋಹನ್ ಸಿಂಗ್ ಅವರಿಗೆ ಪತ್ರ ಬರೆದ ಸೋನಿಯಾ, ರಾಜ್ಯ ಸರ್ಕಾರ ಹಾಗೂ ಐಎಎಸ್ ಅಧಿಕಾರಿ ನಡುವಿನ ಸಮಸ್ಯೆಗೆ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಬಹುದು, ದುರ್ಗಾಶಕ್ತಿ ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಚಿಂತಿಸಿ ಎಂದಿದ್ದಾರೆ. ಅಲ್ಲದೆ ದುರ್ಗಾಶಕ್ತಿ ಅವರಿಗೆ ಅನ್ಯಾಯಯಾಗಿದೆ ಎಂದು ಸೋನಿಯಾ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಸಿಂಗ್, ದುರ್ಗಾ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ದುರ್ಗಾಶಕ್ತಿ ಅಮಾನತಗೊಳಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ರಮವನ್ನು ಖಂಡಿಸಿದ್ದ ಐಎಎಸ್ ಅಧಿಕಾರಿಗಳು ಈ ಕೂಡಲೇ ಪ್ರಕರಣದ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.  

ಗೌತಮ ಬುದ್ಧ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಫಿಯಾ ವಿರುದ್ಧ  ಐಎಎಸ್ ದುರ್ಗಾಶಕ್ತಿ ಅವರನ್ನು ಅಧಿಕಾರ ದುರಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಜುಲೈ 27 ರಂದು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅಮಾನತುಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement